
ಪ್ರಗತಿವಾಹಿನಿ ಸುದ್ದಿ: ಓಮ್‌ದುರ್ಮನ್‌ನ ಉತ್ತರಕ್ಕೆ ವಾಡಿ ಸಯೀದಾ ವಾಯುನೆಲೆಯಿಂದ ಟೇಕಾಫ್ ಆಗುತ್ತಿದ್ದಾಗ ಆಂಟೊನೊವ್ ವಿಮಾನ ಪತನಗೊಂಡಿದೆ ಎಂದು ಸೇನೆಯು ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿದೆ.
ಈ ಅಪಘಾತದಲ್ಲಿ ಕನಿಷ್ಠ 46 ಜನರು ಸಾವನ್ನಪ್ಪಿದ್ದು, 10 ಜನ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಸಶಸ್ತ್ರ ಪಡೆಗಳ ಸಿಬ್ಬಂದಿ ಮತ್ತು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಸೇನೆ ಒಪ್ಪಿಕೊಂಡಿದ್ದರೂ, ಘಟನೆಗೆ ನಿಖರ ಕಾರಣವನ್ನು ತಿಳಿಸಿಲ್ಲ. ವಿಮಾನವು ಓಮ್‌ದುರ್ಮನ್‌ನ ಕರಾರಿ ಜಿಲ್ಲೆಯ ನಾಗರಿಕರ ಮನೆಯ ಮೇಲೆ ಅಪ್ಪಳಿಸಿದೆ ಎಂದು ವರದಿಯಾಗಿದೆ.