ಡಾ. ಪ್ರಭಾಕರ ಕೋರೆಯವರ ಹುಟ್ಟು ಹಬ್ಬದ ನಿಮಿತ್ತ ಸಸಿ ನೆಡುವ ಕಾರ್ಯಕ್ರಮ
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಡಾ. ಪ್ರಭಾಕರ ಕೋರೆಯವರ ಹುಟ್ಟು ಹಬ್ಬದ ನಿಮಿತ್ತ 2000 ಕ್ಕೂ ಅಧಿಕ ಸೀಡ್ ಬಾಲ್ ಗಳ (ಬೀಜದ ಉಂಡೆಗಳು) ಎಸೆತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕೆ.ಎಲ್.ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆಯವರ 72ನೇಯ ಜನ್ಮ ದಿನದ ಅಂಗವಾಗಿ ಚಿಕ್ಕೋಡಿಯ ಕೆಎಲ್ಇ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಕಾಲೇಜಿನ ಆವರಣದಲ್ಲಿ ಸಸಿಗಳನ್ನು ನೇಡುವ ಹಾಗೂ ಚಿಕ್ಕೋಡಿಯ ಸುತ್ತಮುತ್ತಲಿನ ಬೆಟ್ಟಗುಡ್ಡದ ಅರಣ್ಯ ಪ್ರದೇಶದಲ್ಲಿ 2000 ಕ್ಕೂ ಅಧಿಕ ಸೀಡಬಾಲಗಳ (ಬೀಜದ ಉಂಡೆಗಳು) ಎಸೇತ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಪ್ರಸಾದ ರಾಂಪುರೆ – ಮುಂಬರುವ ಪೀಳಿಗೆಗೆ ಸ್ವಚ್ಛ-ಸುಂದರವಾದ ಪರಿಸರವನ್ನು ನೀಡುವ ಜವಾಬ್ದಾರಿ ನಮ್ಮ ಮೇಲಿದೆ. ಈ ನಿಟ್ಟಿನಲ್ಲಿ ಪ್ರತಿ ವರ್ಷ ಡಾ. ಪ್ರಭಾಕರ ಕೋರೆಯವರ ಹುಟ್ಟುಹಬ್ಬದ ನಿಮಿತ್ತ ಗಿಡಗಳನ್ನು ನೆಡುತ್ತಿದ್ದೆವು. ಇಂದು ಅರಣ್ಯ ಪ್ರದೇಶ ಹಾಗೂ ಗುಡ್ಡುಗಾಡಿನಲ್ಲಿ ಗಿಡಮರಗಳನ್ನು ನೆಡಲು ಪರಿಣಾಮಕಾರಿಯಾದ ಮಾರ್ಗವೆಂದರೆ ಬೀಜದ ಉಂಡೆಗಳನ್ನು ಎಸೆಯುವುದಾಗಿದೆ.
ಈ ಪದ್ದತಿಯಿಂದ ಕಡಿಮೆ ಅವಧಿಯಲ್ಲಿ ಹೆಚ್ಚು ಗಿಡಗಳನ್ನು ನೇಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಚಿಕ್ಕೋಡಿಯ ಸುತ್ತಮುತ್ತಲಿನ ಬೆಟ್ಟಗುಡ್ಡದ ಅರಣ್ಯ ಪ್ರದೇಶದಲ್ಲಿ 2000 ಕ್ಕೂ ಹೆಚ್ಚು ಸೀಡ್ ಬಾಲ್ ಗಳ (ಬೀಜದ ಉಂಡೆಗಳು) ಎಸೆತ ಹಮ್ಮಿಕೊಳ್ಳಲಾಯಿತು.
ಎನ್ ಎಸ್ ಎಸ್ ಸಂಯೋಜಕರಾದ ಪ್ರೊ. ವಿಶಾಲ ದಾನವಾಡೆ ನಿರೂಪಿಸಿದರು. ವಿಭಾಗ ಮುಖ್ಯಸ್ಥರಾದ ಪ್ರೊ. ಸತೀಶ ಭೋಜನ್ನವರ, ಪ್ರೊ. ವಿ.ಎಮ್.ಬುದ್ಯಾಳ, ಪ್ರೊ. ವಿ.ಕೆ.ಪಾಟೀಲ, ಪ್ರೊ. ವಿವೇಕ ಪಾಟೀಲ, ಡಾ. ಆರ್.ಕೆ.ಪಾಟೀಲ, ಪ್ರೊ.ಸಚೀನ ಮೆಕ್ಕಳಕಿ ಉಪಸ್ಥಿತರಿದ್ದರು.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ