
ಪ್ರಗತಿವಾಹಿನಿ ಸುದ್ದಿ: ದೀಪಾವಳಿ ಹಬ್ಬಕ್ಕೆ ಮುನ್ನವೇ ಪಿಎಂ ಕಿಸಾನ್ ಯೋಜನೆಯ 24ನೇ ಕಂತಿನ ಹಣ ಬಿಡುಗಡೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಕೇಂದ್ರ ಸರ್ಕಾರ ಹಬ್ಬದ ಸಂದರ್ಭದಲ್ಲಿ ಸಿಹಿ ಸುದ್ದಿ ನೀಡಿದೆ.
ಕೇಂದ್ರ ಸರ್ಕಾರ ಹೊರಡಿಸಿರುವ ಪ್ರಕಟಣೆ ಪ್ರಕಾರ, ಪಿಎಂ ಕಿಸಾನ್ ಯೀಜನೆ ಹಣ ಬಿಡುಗಡೆ ದಿನಾಂಕ ನಿಗದಿಯಾಗಿದೆ. 9.34 ಕೋಟಿ ಅರ್ಹ ರೈತರಿಗೆ ತಲಾ 2,000 ರೂ ಅನ್ನು ನೇರವಾಗಿ ಬ್ಯಾಂಕ್ ಅಕೌಂಟ್ಗೆ ವರ್ಗಾವಣೆ ಮಾಡಲಿದೆ.
ಸರ್ಕಾರ ಒಟ್ಟು 18,700 ಕೋಟಿ ರೂ ಹಣವನ್ನು ರೈತರಿಗೆ ನೀಡುತ್ತಿದೆ. ಅಕ್ಟೋಬರ್ 30, ಅಂದರೆ ನಾಳೆ ಶುಕ್ರವಾರವೇ ಹಣ ಬಿಡುಗಡೆ ಆಗುತ್ತಿದೆ.
ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸಿದ್ದು, ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೂ 24ನೇ ಕಂತಿನ ಹಣ ಬರುತ್ತದೆ ಎಂದು ಖಾತ್ರಿ ಇಲ್ಲ. ಇ-ಕೆವೈಸಿ ಆಗದಿದ್ದರೆ ಹಣ ಸಿಗುವುದಿಲ್ಲ. ಬ್ಯಾಂಕ್ ಅಕೌಂಟ್ ತಪ್ಪಾಗಿ ನಮೂದಿಸಿದ್ದರೂ ಹಣ ಕ್ರೆಡಿಟ್ ಆಗುವುದಿಲ್ಲ. ಪಹಣಿ ದಾಖಲೆಯೂ ಸರಿಯಾಗಿರಬೇಕು. ಹೀಗಾಗಿ, ಅನುಮಾನಗಳಿದ್ದರೆ ಮತ್ತೊಮ್ಮೆ ಇ-ಕೆವೈಸಿ ಮಾಡಬಹುದು.
ಕೃಷಿಯಲ್ಲಿ ನಿರತರಾಗಿರುವ ರೈತರಿಗೆ ಸರ್ಕಾರ ವರ್ಷಕ್ಕೆ 6,000 ರೂ ಧನಸಹಾಯ ನೀಡುವ ಯೋಜನೆ ಇದು. 2018-19ರಲ್ಲಿ ಚಾಲನೆಗೊಂಡ ಈ ಯೋಜನೆಯಲ್ಲಿ ವರ್ಷಕ್ಕೆ ಮೂರು ಕಂತುಗಳಲ್ಲಿ ಈ 6,000 ರೂ ಅನ್ನು ನೀಡಲಾಗುತ್ತಿದೆ. ತಲಾ 2,000 ರೂಗಳ 23 ಕಂತು ಹಣವನ್ನು ಈವರೆಗೂ ಬಿಡುಗಡೆ ಮಾಡಲಾಗಿದೆ.
ಅರ್ಹ ರೈತರು ಯಾರು?
ಸ್ವಂತ ಕೃಷಿ ಜಮೀನು ಹೊಂದಿರಬೇಕು.
2019ರ ಫೆಬ್ರುವರಿ 1ಕ್ಕೆ ಮುಂಚೆ ಜಮೀನು ಖರೀದಿಸಿದ್ದಾಗಿರಬೇಕು.
ಕುಟುಂಬದಲ್ಲಿ ಯಾರೂ ಸರ್ಕಾರಿ ನೌಕರರು, ಶಾಸಕರು, ಸಂಸದರು, ವೃತ್ತಿಪರರು ಇತ್ಯಾದಿ ಆಗಿರಬಾರದು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




