ಪ್ರಗತಿವಾಹಿನಿ ಸುದ್ದಿ : ಜಾಗತಿಕ ನಾಯಕ ಎಂದು ಬಿಂಬಿತವಾಗ್ತಿರುವ ಪಿಎಂ ಮೋದಿ ಎರಡು ದಿನಗಳ ಕಾಲ ಮತ್ತೊಂದು ವಿದೇಶ ಪ್ರವಾಸ ಕೈಗೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 10 ಮತ್ತು 11 ರಂದು ಎರಡು ದಿನಗಳ ಲಾವೋಸ್ ಪ್ರವಾಸದಲ್ಲಿದ್ದು, ಈ ಸಂದರ್ಭದಲ್ಲಿ ಅವರು 21 ನೇ ಆಸಿಯಾನ್- ಭಾರತ ಶೃಂಗಸಭೆ ಮತ್ತು 19 ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
ಎರಡು ಶೃಂಗಸಭೆಗಳ ಅಂಚಿನಲ್ಲಿ ಮೋದಿ ದ್ವಿಪಕ್ಷೀಯ ಸಭೆಗಳನ್ನು ನಡೆಸುವ ನಿರೀಕ್ಷೆಯಿದೆ.ಲಾವೋಸ್ ಆಸಿಯಾನ್ ನ ಪ್ರಸ್ತುತ ಅಧ್ಯಕ್ಷ ರಾಷ್ಟ್ರವಾಗಿದೆ. ಲಾವೋಸ್ ಪ್ರಧಾನಿ ಸೋನೆಕ್ಷೇ ಸಿಫಾಂಡನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅಕ್ಟೋಬರ್ 10-11 ರಂದು ವಿಯೆಂಟಿಯಾನ್ ಗೆ ಭೇಟಿ ನೀಡಲಿದ್ದಾರೆ. ರಾಷ್ಟ್ರಗಳ ನಡುವಿನ ವ್ಯಾಪಾರ ಉತ್ತೇಜನ. ಬೃಹತ್ ವಿದೇಶಿ ಹೂಡಿಕೆ ಸೇರಿದಂತೆ ಅನೇಕ ಒಪ್ಪಂದಗಳ ಬಗ್ಗೆ ಮಹತ್ವದ ಚರ್ಚೆ ನಡೆಯುವ ಸಾಧ್ಯತೆ ಇದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ