ಪ್ರಗತಿವಾಹಿನಿ ಸುದ್ದಿ; ರೋಹ್ಟಂಗ್: ಮನಾಲಿ ಹಾಗೂ ಲೇಹ್ ನಡುವೆ ಸಂಪರ್ಕ ಕಲ್ಪಿಸುವ ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ ಮಾರ್ಗ ಅಟಲ್ ಟನಲ್ ಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ.
ಹಿಮಾಚಲಪ್ರದೇಶದ ರೋಹ್ಟಂಗ್ ನಲ್ಲಿ ನಿರ್ಮಿಸಲಾಗಿರುವ ಆಧುನಿಕ ಹೆದ್ದಾರಿ ಸುರಂಗ ಇದಾಗಿದ್ದು, ಮನಾಲಿ ಮತ್ತು ಲೇಹ್ ನಡುವಿನ 9 ಕೀ.ಮೀ ಉದ್ದ ಸುರಂಗವಾಗಿದೆ. ಅಟಲ್ ಟನಲ್ ಹಿಮಾಚಲ ಪ್ರದೇಶದ ಮನಾಲಿಯಿಂದ ಲೇಹ್‌ವರೆಗಿನ ಪ್ರಯಾಣದ ಅವಧಿಯನ್ನು 4-5 ಗಂಟೆ ಕಡಿಮೆ ಮಾಡಲಿದೆ. ಅಲ್ಲದೇ ಪ್ರಯಾಣಿಕರಿಗೆ ಒಟ್ಟು 46 ಕಿ.ಮೀ ದೂರದ ಪ್ರಯಾಣವನ್ನು ಉಳಿಸಲಿದೆ.
ಪ್ರಧಾನಿ ಮೋದಿ ಹಿಮಾಚಲ ಪ್ರದೇಶದ ರೋಹ್ಟಂಗ್ ನಲ್ಲಿ ಸುರಂಗ ಮಾರ್ಗಕ್ಕೆ ಚಾಲನೆ ನೀಡಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ