Latest

*ಪ್ರಧಾನಿ ಮೋದಿ ಮನೆಗೆ ಹೊಸ ಅತಿಥಿ ಆಗಮನ; ವಿಡಿಯೋ ನೋಡಿ*

ಪ್ರಗತಿವಾಹಿನಿ ಸುದ್ದಿ; ಪ್ರಧಾನಿ ನರೇಂದ್ರ ಮೋದಿ ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಪ್ರಧಾನಿ ನಿವಾಸದಲ್ಲಿದ್ದ ಗೋಮಾತೆ ಕರುವಿಗೆ ಜನ್ಮ ನೀಡಿದ್ದು, ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.

ಕರುವಿಗೆ ವಿಶೇಷವಾಗಿ ಪೂಜಿಸಿ, ಎತ್ತಿ ಮುದ್ದಾಡಿದ್ದಾರೆ.

ಕರುವಿನೊಂದಿಗೆ ಪ್ರಧಾನಿ ಮೋದಿ ಸಂತಸದಿಂದ ಕಾಲಕಳೆದಿರುವ ಕ್ಷಣಗಳ ವಿಡಿಯೋ ವೈರಲ್ ಆಗಿದೆ. ಅಲ್ಲದೇ ಪುಟ್ಟ ಕರುವಿಗೆ ಹೆಸರನ್ನೂ ಇಟ್ಟಿದ್ದಾರೆ. ಈ ಬಗ್ಗೆ ರಾಜ್ಯ ಬಿಜೆಪಿ ಸಾಮಾಜಿಕ ಜಾಲತಾಣಗಳಲಿ ವಿಡಿಯೋ ಪೋಸ್ಟ್ ಮಾಡಿದೆ.

ಗಾವೋ ವಿಶ್ವಸ್ಯ ಮಾತರಃ


ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ಗೋಮಾತೆ ಕರುವಿಗೆ ಜನ್ಮ ನೀಡಿದ್ದು, ಅದರ ಹಣೆಯ ಮೇಲೆ ಬೆಳಕಿನ ಗುರುತು ಇರುವುದರಿಂದ ಅದಕ್ಕೆ ಪ್ರಧಾನಿ ಮೋದಿ ಅವರು ಕರುವಿಗೆ ʼದೀಪಜ್ಯೋತಿʼ ಎಂದು ಹೆಸರಿಟ್ಟಿದ್ದಾರೆ ಎಂದು ಪೋಸ್ಟ್ ಮಾಡಿದೆ.

ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಕೂಡ ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಕರು ದೀಪಜ್ಯೋತಿ ಜೊತೆ ಇರುವ ಕ್ಷಣಗಳನ್ನು ಪೋಸ್ಟ್ ಮಾಡಿದ್ದಾರೆ.

https://t.co/vvyCTJgNko
(https://x.com/pradeepraturig/status/1834850102814384149?t=omKaSI1z1k0N8BrhDP2z2Q&s=03

https://t.co/vBqPYCbbw4 ( https://x.com/narendramodi/status/1834849574051099038?t=JuSG8eaG0KYRWJ5Atb7lBQ&s=03 )

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button