ಭಾನುವಾರ ಜನತಾ ಕರ್ಫ್ಯೂ: ರಾಜ್ಯದಲ್ಲಿ ಸಂಪೂರ್ಣ ಬಂದ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ವೈರಸ್ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಕಟ್ಟುನಿಟ್ಟಿ ಕ್ರಮ ಕೈಗೊಂಡಿದ್ದು, ಈ ನಡುವೆ ಪ್ರಧಾನಿ ಮೋದಿ ಮಾರ್ಚ್ 22ರಂದು ಭಾನುವಾರ ದೇಶಾದ್ಯಂತ ಜನತಾ ಕರ್ಫ್ಯೂಗೆ ಕರೆ ನೀಡಿದ್ದಾರೆ.

ಕೊರೊನಾ ವಿರುದ್ಧ ಹೋರಾಟವನ್ನು ಎಲ್ಲರೂ ಗಂಭೀರವಾಗಿ ತೆಗೆದುಕೊಂಡು ಕೈಜೋಡಿಸಬೇಕು. ಭಾನುವಾರ ಇಡೀ ದಿನ ಜನತಾ ಕರ್ಫ್ಯೂ ಆಚರಿಸಬೇಕು ಎಂದು ತಿಳಿಸಿದ್ದಾರೆ. ಪ್ರಧಾನಿ ಕರೆಗೆ ಸಾಕಷ್ಟು ಮಂದಿ ಓಗೊಟ್ಟಿದ್ದು, ರಾಜ್ಯದ ವಿವಿಧ ಸಂಘ-ಸಂಸ್ಥೆಗಳು ಜನತಾ ಕರ್ಫ್ಯೂ ಆಚರಣೆಗೆ ಬೆಂಬಲ ವ್ಯಕ್ತಪಡಿಸಿವೆ.

ಬೆಂಗಳೂರಿನಲ್ಲಿ ಬಿಎಂಟಿಸಿ ಮತ್ತು ಕೆಎಸ್ಸಾರ್ಟಿಸಿ ಸಂಸ್ಥೆಗಳು ಜನತಾ ಕರ್ಫ್ಯೂ ಕರೆಗೆ ಬೆಂಬಲ ನೀಡಿದ್ದು, ಭಾನುವಾರದಂದು ಬಸ್ ಮತ್ತು ಕ್ಯಾಬ್​ಗಳ ಸಂಚಾರ ಇರುವುದಿಲ್ಲ. ಓಲಾ ಮತ್ತು ಊಬರ್ ಸಂಸ್ಥೆಗಳೂ ಕೂಡ ಒಂದು ದಿನದ ಮಟ್ಟಿಗೆ ಕ್ಯಾಬ್ ಸೇವೆ ನಿಲ್ಲಿಸುವುದಾಗಿ ತಿಳಿಸಿವೆ.

ಜನತಾ ಕರ್ಫ್ಯೂಗೆ ಹೋಟೆಲ್​ಗಳ ಸಂಘ ಬೆಂಬಲ ನೀಡಿದೆ. ಭಾನುವಾರ ಬಹುತೇಕ ಎಲ್ಲಾ ಹೋಟೆಲ್, ಸ್ವೀಟ್ ಸ್ಟಾಲ್, ರೆಸ್ಟೋರೆಂಟ್, ಬೇಕರಿ, ಕೆಟರಿಂಗ್​ಗಳು, ಬಾರ್ ಹಾಗೂ ರೆಸ್ಟೋರಂಟ್ ಗಳು ಬಾಗಿಲು ಬಂದ್ ಮಾಡಲಿವೆ. ಅಲ್ಲದೇ ಮಾರ್ಕೆಟ್, ದಿನಸಿ ಅಂಗಡಿಗಳು ಕೂಡ ಬಂದ್ ಆಗಲಿವೆ.

ಬೆಳಗಾವಿ ಜಿಲ್ಲಾದ್ಯಂತ 144ನೇ ಕಲಂ ಅನ್ವಯ ನಿಷೇಧಾಜ್ಞೆ

ಗೋವಾ, ಮಹಾರಾಷ್ಟ್ರ ಬಸ್ ಸಂಚಾರ ಸಂಪೂರ್ಣ ಸ್ಥಗಿತ; ಜಿಲ್ಲೆಯಲ್ಲಿ 118 ಜನರ ಮೇಲೆ ನಿಗಾ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button