Latest

9 ಕೋಟಿ ಅನ್ನದಾತರ ಖಾತೆಗೆ ಹಣ ಜಮಾ ಮಾಡಿದ ಪ್ರಧಾನಿ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ 9 ಕೋಟಿ ರೈತರ ಖಾತೆಗಳಿಗೆ ಹಣ ಬಿಡುಗಡೆ ಮಾಡಿದರು.

ನವದೆಹಲಿಯಲ್ಲಿ ಕಿಸಾನ್ ಸಮ್ಮಾನ್ ಯೋಜನೆ ಉದ್ಘಾಟಿಸಿದ ಪ್ರಧಾನಿ ಮೋದಿ, 9 ಕೋಟಿ ರೈತರ ಖಾತೆಗೆ ತಲಾ 2,000 ರೂನಂತೆ ಒಟ್ಟು 18 ಸಾವಿರ ಕೋಟಿ ರೂ. ಹಣ ಜಮೆಮಾಡಿದರು. ಈ ವೇಳೆ ಪ್ರಧಾನಿ ಮೋದಿ ಕರ್ನಾಟಕ ಸೇರಿದಂತೆ 6 ರಾಜ್ಯಗಳ ರೈತರ ಜೊತೆ ಸಂವಾದ ನಡೆಸಿದರು.

ಬಳಿಕ ಮಾತನಾಡಿದ ಅವರು, ದೇಶದ ರೈತ ಸಮುದಾಯವನ್ನು ಅಭಿವೃದ್ಧಿಗೊಳಿಸುವುದೇ ಕೇಂದ್ರದ ಪ್ರಮುಖ ಆದ್ಯತೆ. ಅನ್ನದಾತರನ್ನು ಆರ್ಥಿಕ ಸಬಲರನ್ನಾಗಿ ಮಾಡುವುದೇ ನಮ್ಮ ಉದ್ದೇಶ ಎಂದರು.

ನಮ್ಮ ಸರ್ಕಾರ ರೈತರಿಗಾಗಿ ಕ್ರಾಂತಿಕಾರಿ ಯೋಜನೆಯನ್ನು ಜಾರಿಗೆ ತಂದಿದೆ. ಎಲ್ಲಾ ರಾಜ್ಯದ ರೈತರು ಕಿಸಾನ್ ಸಮ್ಮಾನ್ ಯೋಜನೆ ಲಾಭ ಪಡೆದಿದ್ದಾರೆ. ಆದರೆ ಪಶ್ಚಿಮ ಬಂಗಾಳ ಸರ್ಕಾರ ಮಾತ್ರ ನಮ್ಮ ಜೊತೆ ಕೈಜೋಡಿಸಿಲ್ಲ. ಪಶ್ಚಿಮ ಬಂಗಾಳದ 70 ಲಕ್ಷ ರೈತರಿಗೆ ಈ ಯೋಜನೆ ಲಾಭ ಸಿಕ್ಕಿಲ್ಲ. ರಾಜಕೀಯ ದುರುದ್ದೇಶದಿಂದ ರೈತರಿಗೆ ಯೋಜನೆಯ ಲಾಭ ಸಿಗದಂತೆ ಮಾಡುತ್ತಿದ್ದಾರೆ. ನಿರ್ದೋಶಿಗಳಾದ ರೈತರ ಭವಿಷ್ಯದ ಜೊತೆ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಆಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Home add -Advt

Related Articles

Back to top button