Latest

ಮೇ 3ರ ವರೆಗೆ ಲಾಕ್ ಡೌನ್ ವಿಸ್ತರಣೆ, ಇನ್ನಷ್ಟು ಕಠಿಣ – ಮೋದಿ ಘೋಷಣೆ

ಪ್ರಗತಿವಾಹಿನಿ ಸುದ್ದಿ, ನವದೆಹಲಿ – ರಾಷ್ಟ್ರದಲ್ಲಿ ಇನ್ನೂ 3 ವಾರ ಲಾಕ್ ಡೌನ್ ವಿಸ್ತರಣೆ ಅನಿವಾರ್ಯ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ರಾಷ್ಟ್ರವನ್ನುದ್ಧೇಶಿಸಿ ಅವರು ಮಾತನಾಡುತ್ತಿದ್ದರು.  ಇನ್ನೂ ಒಂದು ವಾರ ಕಠಿಣವಾದ ಲಾಕ್ ಡೌನ್ ಇರುತ್ತದೆ. ಕೊರೋನಾ ಕಂಡುಬಂದಿರುವ ಪ್ರದೇಶಗಳಲ್ಲಿ ಇದು ಹೆಚ್ಚು ಪ್ರಬಲವಾಗಿರುತ್ತದೆ. ಯಾರಿಗೂ ಯಾವುದೇ ರೀತಿಯ ವಿನಾಯಿತಿ ಇರುವುದಿಲ್ಲ. ಈ ಸಂಬಂಧ ನಾಳೆ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಅವರು ಹೇಳಿದರು.

ಸಂವಿಧಾನ ಶಿಲ್ಪಿ ಬಾಬಾ ಸಾಹೇಬ ಅಂಬೇಡ್ಕರ ಅವರಿಗೆ ನಮಿಸುವ ಮೂಲಕ ಮೋದಿ ತಮ್ಮ ಭಾಷಣ ಆರಂಭಿಸಿದರು. ಲಾಕ್ ಡೌನ್ ನಿಂದಾಗಿ ನೀವೆಲ್ಲ ಅನುಭವಿಸಿದ ಸಂಕಷ್ಟಗಳ ಅರಿವು ನನಗಿದೆ. ಕೆಲವರಿಗೆ ಓಡಾಡಲು ತೊಂದರೆಯಾಯಿತು. ಕೆಲವರಿಗೆ ಊಟಕ್ಕೂ ತೊಂದರೆಯಾಯಿತು. ಎಲ್ಲರ ಸಹಕಾರದಿಂದ ನಾವು ಕೊರೋನಾ ವಿರುದ್ಧ ಹೋರಾಡಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.

ವಿದೇಶದಿಂದ ವಿಮಾನದ ಮೂಲಕ ಬಂದವರನ್ನೆಲ್ಲ ನಾವು ಕ್ವಾರಂಟೈನ್ ಮಾಡಿದ್ದೇವೆ. ತೆಗೆದುಕೊಳ್ಳಬೇಕಾದ ಎಲ್ಲ ಕ್ರಮಗಳನ್ನೂ ತೆಗೆದುಕೊಂಡಿದ್ದೇವೆ. ಹಾಗಾಗಿಯೇ ಕೊರೋನಾ ನಿಯಂತ್ರಿಸಲು ಸಾಧ್ಯವಾಗಿದೆ. ನಾವು ತೆಗೆದುಕೊಂಡ ಎಲ್ಲ ಕ್ರಮಗಳೂ ಸರಿಯಾಗಿದೆ. ಅದರಿಂದಾಗಿ ಇಷ್ಟು ನಿಯಂತ್ರಣ ನಮ್ಮಿಂದ ಸಾಧ್ಯವಾಗಿದೆ ಎಂದು ಪ್ರಧಾನಿ ಹೇಳಿದರು.

ಇನ್ನೂ 3 ವಾರ ಲಾಕ್ ಡೌನ್ ವಿಸ್ತರಣೆ ಅನಿವಾರ್ಯ. ಇನ್ನು ಒಂದು ವಾರ ಇದು ಇನ್ನಷ್ಟು ಕಠಿಣವಾಗರುತ್ತದೆ. ನಿಮ್ಮ ಸ್ಪಂದನೆ ನೋಡಿ ಸಡಿಲಿಸುವ ಬಗ್ಗೆ ಯೋಚಿಸಲಾಗುವುದು. ನಿಮ್ಮೆಲ್ಲರ ತ್ಯಾಗ, ತಪಸ್ಸು ನನ್ನ ಗಮನದಲ್ಲಿದೆ. ಆದರೆ ಅದು ಅನಿವಾರ್ಯವಾಗಿದೆ. ಅದಕ್ಕೆ ಈ ರಾಷ್ಟ್ರ ಗೌರವ ಸಲ್ಲಿಸುತ್ತದೆ, ವಿಶ್ವಕಲ್ಯಾಣಕ್ಕಾಗಿ, ಭಾರತ ಕಲ್ಯಾಣಕ್ಕಾಗಿ ಎಲ್ಲರೂ ಕೈ ಜೋಡಿಸೋಣ. ಕೊರೋನಾ ವಿರುದ್ಧ ಹೋರಾಡುತ್ತಿರುವವರಿಗೆಲ್ಲ ನಮನ ಸಲ್ಲಿಸೋಣ ಎಂದು ಅವರು ಹೇಳಿದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button