Latest

ಮಾಜಿ ಸಿಎಂ ಜೆಎಚ್ ಪಟೇಲ್ ಪತ್ನಿ ಸರ್ವಮಂಗಳಮ್ಮ ನಿಧನ

 ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –  ಮಾಜಿ ಮುಖ್ಯಮಂತ್ರಿ, ದಿವಂಗತ ಜೆ.ಎಚ್.ಪಟೇಲ್ ಅವರ ಪತ್ನಿ ಸರ್ವಮಂಗಳಮ್ಮ ಪಟೇಲ್ (84) ಶನಿವಾರ ನಿಧರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸರ್ವಮಂಗಳಮ್ಮ ಬೆಂಗಳೂರಿನ ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ನಿಧನರಾಗಿದ್ದಾರೆ.
ಸರ್ವಮಂಗಳಮ್ಮ ಅವರಿಗೆ ಮಾಜಿ ಶಾಸಕ, ಪುತ್ರ ಮಹಿಮಾ ಪಟೇಲ್ ಸೇರಿ ಇಬ್ಬರು ಪುತ್ರರಿದ್ದು ಒಬ್ಬ ಪುತ್ರ ನಿಧನರಾಗಿದ್ದಾರೆ.  ಜೆ.ಎಚ್.ಪಟೇಲ್ ಅವರ ರಾಜಕೀಯ ಜೀವನದಲ್ಲಿ ಸರ್ವಮಂಗಳ ಮಹತ್ವದ ಪಾತ್ರ ವಹಿಸಿದ್ದರು.
 ಅಂತ್ಯಕ್ರಿಯೆ ಭಾನುವಾರ ಕಾರಿಗನೂರಿನ‌ಲ್ಲಿ‌ ನಡೆಯಲಿದೆ. ಜೆ.ಎಚ್.ಪಟೇಲ್ ಸಮಾಧಿಯ ಬಳಿಯೇ ಪತ್ನಿಯ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳುನ ತಿಳಿಸಿವೆ.

Related Articles

Back to top button