Kannada NewsLatestUncategorized

*ಭಾರತೀಯ ಸೇನೆಯ ಎರಡು ವಿಮಾನ ಅಪಘಾತ ಪ್ರಕರಣ; ಬೆಳಗಾವಿಯ ವಿಂಗ್ ಕಮಾಂಡರ್ ಹನುಮಂತರಾವ್ ಸಾರಥಿ ಹುತಾತ್ಮ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: IAF ಯುದ್ಧ ವಿಮಾನಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೆಳಗಾವಿಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ ಎಂದು ತಿಳಿದುಬಂದಿದೆ.

Home add -Advt

ಬೆಳಗಾವಿ ಮೂಲದ ವಿಂಗ್ ಕಮಾಂಡರ್ ಹನುಮಂತರಾವ್ ಆರ್.ಸಾರಥಿ ಹುತಾತ್ಮರಾಗಿದ್ದಾರೆ. ಹನುಮಂತರಾವ್ ಬೆಳಗಾವಿಯ ಗಣೇಶಪುರದ ನಿವಾಸಿ. ಹನುಮಂತರಾವ್ ನಿವಾಸಕ್ಕೆ ಭಾರತೀಯ ಸೇನೆ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ನೀಡಿದ್ದಾರೆ. ಕುಟುಂಬದ ಆಕ್ರಂದನ ಮುಗಿಲುಮುಟ್ಟಿದೆ.

ಮಧ್ಯಪ್ರದೇಶದ ಮೊರೆನಾದಲ್ಲಿ ಇಂದು ಎರಡು ಜೆಟ್ ವಿಮಾನಗಳ ನಡುವೆ ಡಿಕ್ಕಿಯಾಗಿತ್ತು. ಸುಖೋಯ್-30 ಹಾಗೂ ಮಿರಾಜ್-2000 ವಿಮಾನಗಳು ತಾಲೀಮು ನಡೆಸುತ್ತಿದ್ದ ವೇಳೆ ಪರಸ್ಪರ ಡಿಕ್ಕಿಹೊಡೆದು ಮೊರೆನಾ ಪ್ರದೇಶದಲ್ಲಿ ಪತನಗೊಂಡಿದ್ದವು.

ಈ ನಡುವೆ ಸುದ್ದಿ ತಿಳಿಯುತ್ತಿದ್ದಂತೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹುತಾತ್ಮ ಯೋಧ ಹನುಮಂತರಾವ್ ಅವರ ನಿವಾಸಕ್ಕೆ ಧಾವಿಸಿದ್ದಾರೆ.

 

*ಭಾರತೀಯ ಸೇನಾ ವಿಮಾನಗಳ ನಡುವೆ ಭೀಕರ ಅಪಘಾತ; ಮೊರೆನಾ ಬಳಿ ಪತನಗೊಂಡ ಎರಡು ವಿಮಾನಗಳು*

https://pragati.taskdun.com/air-force-plane-crashmorena-fighter-jet-sukhoimiraj-plane-crash/

Related Articles

Back to top button