Kannada NewsKarnataka NewsLatestNationalPolitics

*ಇಂಡಿಯಾ ಮೈತ್ರಿಕೂಟ ರಾಮನ ಹೆಸರು ಹೇಳಿದ್ರೆ ದ್ವೇಷ ಕಾರುತ್ತದೆ; ಪ್ರಧಾನಿ ಮೋದಿ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನವಣಾ ಅಖಾಡ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಪಿಲಿಬಿತ್ ನಲ್ಲಿ ಬಿಜೆಪಿ ಅಭ್ಯರ್ಥಿ ಜಿತನ್ ಪ್ರಸಾದ್ ಪರ ಭರ್ಜರಿ ಪ್ರಚಾರ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ನಲ್ಲಿ ವಿಷ ತುಂಬಿದೆ. ಇಂಡಿಯಾ ಮೈತ್ರಿ ಕೂಟ ರಾಮನ ಹೆಸರು ಹೇಳಿದರೆ ದ್ವೇಷ ಕಾರುತ್ತದೆ. ಇಂಡಿಯಾ ಒಕ್ಕೂಟ ರಾಮ ವಿರೋಧಿ ಮನಸ್ಥಿತಿ ಹೊಂದಿದೆ. ಜಗತ್ತಿನಾದ್ಯಂತ ಕೋಟ್ಯಂತರ ಜನ ಪೂಜಿಸುವ ಶಕ್ತಿಯನ್ನೆ ಅವಮಾನಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ರಾಮ ಮಂದಿರ ನಿರ್ಮಾಣವನ್ನು ತದೆಯುವ ಯತ್ನ ನಡೆಸಿತ್ತು. ಅಲ್ಲದೇ ಮಹಾಮಸ್ತಕಾಭಿಷೇಕ ಸಮಾರಂಭದ ಆಹ್ವಾನವನ್ನು ತಿರಸ್ಕರಿಸಿತ್ತು. ಕಾಂಗ್ರೆಸ್ ಈ ಸಮಾರಂಭದಲಿ ಭಾಗಿಯಾಗಿದ್ದ ಸದಸ್ಯರೆಲ್ಲರನ್ನೂ ದೂರ ಇಟ್ಟಿದೆ. ಈ ದೇಶದ ಪರಂಪರೆ ಬಗ್ಗೆ ಕಾಂಗ್ರೆಸ್ ಗೆ ಕಾಳಜಿ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

Home add -Advt


Related Articles

Back to top button