Belagavi NewsBelgaum NewsKarnataka NewsLatest

*ವಿಜೃಂಭಣೆಯಿಂದ ಜರುಗಿದ ನಾದ ಸುಧಾ ಸಂಗೀತ ಶಾಲೆ ವಿದ್ಯಾರ್ಥಿಗಳ ರಸಮಂಜರಿ ಕಾರ್ಯಕ್ರಮ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ : ಬೆನಕನಹಳ್ಳಿಯಲ್ಲಿರುವ ಘರಕುಲ್ ವೃದ್ಧಾಶ್ರಮದ ರಜತ ಮಹೋತ್ಸವ ವರ್ಷದ ಪ್ರಯುಕ್ತ ಬೆಳಗಾವಿಯ ನಾದ ಸುಧಾ ಸಂಗೀತ ಶಾಲೆಯ ರಸಮಂಜರಿ ಕಾರ್ಯಕ್ರಮ ರವಿವಾರ ವಿಜೃಂಭಣೆಯಿಂದ ಜರುಗಿತು.

ವಿದ್ವಾನ್ ಎಂ.ಜಿ.ರಾವ್ ಮಾತನಾಡಿ, ಒಂದು ಕಲ್ಲನ್ನು ಮೂರ್ತಿಯಾಗಿ ಹೊರ ಹೊಮ್ಮಿಸುವುದು, ಒಂದು ಶಾಲೆಯ ಕೆಲಸ. ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಎಂದರೆ ಪ್ರಭು ನಗರದಿಂದ ಬಂದಿರುವಂತಹ ಪುಟಾಣಿ ಸಾವಿತ್ರಮ್ಮ, ಇವತ್ತು ಹಾಡಿದ ಎಸ್. ಜಾನಕಿ ಅವರ ನೆನಪಿನ, ದೇವರ ಆಟ ಬಲ್ಲವರಾರು ಹಾಡು ಸಾಕ್ಷಿ ಆಗಿದೆ. ಅಂತಹ ಕೆಲಸವನ್ನು ನಾದಸುಧಾ ಸಂಗೀತ ಶಾಲೆಯ ಡಾ. ಸತ್ಯನಾರಾಯಣ ಅವರು 17 ವರ್ಷಗಳಿಂದ ಮಾಡುತ್ತಿದ್ದಾರೆ. ಇದರ ಮೇಲೆ ಡಾ. ಸತ್ಯನಾರಾಯಣ ಅವರ ಪರಿಶ್ರಮ ಎಷ್ಟಿದೆ ಎಂದು ಊಹಿಸಬಹುದು ಎಂದು ಹೇಳಿದರು.

Home add -Advt

ಒಂದು ತಿಂಗಳಲ್ಲಿ ಇಷ್ಟು ಚೆನ್ನಾಗಿ ಹಾಡಿರಬೇಕಾದರೆ ಇದರಲ್ಲಿ ಸತ್ಯನಾರಾಯಣ ಗುರುಗಳ ಶ್ರಮ ಎಷ್ಟಿದೆ ಎಂದು ಊಹಿಸಬಹುದು.
ಘರ್ ಕೂಲ ವೃದ್ಧಾಶ್ರಮದ ಮುಖ್ಯಸ್ಥ ರಾಜೀವ ಪೋದ್ದಾರ ಅವರು ಇಂತಹ ಅದ್ಭುತ ವೇದಿಕೆಯ ಮೇಲೆ ಎಲ್ಲಾ ಮಕ್ಕಳು ಭಾಷೆಗೆ ಭೇದವಿಲ್ಲವಂತೆ ಕನ್ನಡ, ಹಿಂದಿ, ಮರಾಠಿ ಹಾಡು ಹಾಗೂ ನೃತ್ಯವನ್ನು ಸತತ ಎರಡು ಗಂಟೆಗಳ ಕಾಲ ವಯೋವೃದ್ಧರಿಗೆ ಸಂಗೀತ ರಸದೌತಣ ನೀಡಿದ್ದಾರೆ.


ಘರಕುಲ್ ಸಂಸ್ಥೆಯ ಸಂಸ್ಥಾಪಕ ರಾಜು ಪೋದ್ದಾರ್ ಅವರು ಮೇಲಿಂದ ಮೇಲೆ ಇಂತಹ ಸಂಗೀತ ಹಾಗೂ ನೃತ್ಯ ಕಾರ್ಯಕ್ರಮವನ್ನು ನೀಡಿ ಇಲ್ಲಿನ ವಯೋವೃದ್ಧರಿಗೆ ಮನರಂಜಿಸುವ ಮನಸ್ಸು ಮುದ ನೀಡುವಂತಹ ಕಾರ್ಯಕ್ರಮವನ್ನು ನೀಡಬೇಕೆಂದು ಸತ್ಯನಾರಾಯಣ ಅವರಿಗೆ ಮನವಿ ಮಾಡಿಕೊಂಡರು. ಇದಕ್ಕಿಂತ ದೊಡ್ಡ ಕಾರ್ಯ ಮತ್ತೊಂದಿಲ್ಲ ಎಂದು ನಾದ ಸುಧಾ ಮಕ್ಕಳನ್ನು ಶ್ಲಾಘಿಸಿದರು. ಲಕ್ಷ್ಮೀ ಪೋದ್ದಾರ್ ನಿರೂಪಿಸಿದರು. ಸ್ನೇಹಲ್ ಬೆಟಗೇರಿ ವಂದಿಸಿದರು.

Related Articles

Back to top button