
ಪ್ರಗತಿ ವಾಹಿನಿ ಸುದ್ದಿ, ಭಟ್ಕಳ: ತಾಲೂಕಿನ ಹಡೀಲ್ ಸುಬ್ಬತ್ತಿಯಲ್ಲಿ ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನಾರಾಯಣ ನಾಯ್ಕ (64) ಮೃತ ಆರೋಪಿ. ಈತನ ಮೇಲೆ 2014 ರಲ್ಲಿ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿತ್ತು.
ಕಾರವಾರ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿತ್ತು. ಪ್ರಕರಣದಿಂದ ಮನ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅನುಮಾನಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ತಬಸ್ಸುಮ್ ತಲೆಗೆ ಏಟು ಬಿದ್ದಿದ್ದು ಹೇಗೆ ? ಕುತೂಹಲಕಾರಿ ತಿರುವು ಪಡೆದ ಪ್ರಕರಣ