Latest

ಕಾನ್ಸ್ ಟೇಬಲ್ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಆಗ್ರಹ; 5000 ಕಾನ್ಸ್ ಟೇಬಲ್ ಗಳ ಶೀಘ್ರ ನೇಮಕಾತಿ ಎಂದ ಗೃಹ ಸಚಿವ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: 5,000 ಕಾನ್ಸ್ ಟೇಬಲ್ ಗಳ ನೇಮಕಾತಿಗೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ಶಾಸಕ ಪ್ರೀತಂ ಗೌಡ ಪೊಲೀಸ್ ಕಾನ್ಸ್ ಟೇಬಲ್ ಗಳ ನೇಮಕಾತಿ ವಿಳಂಬವಾಗುತ್ತಿರುವ ಬಗ್ಗೆ ಪ್ರಶ್ನಿಸಿದರು. ಈ ವೇಳೆ ಉತ್ತರಿಸಿದ ಗೃಹ ಸಚಿವ ಅರಗ ಜ್ಞಾನೇಂದ್ರ, 9432 ಪೊಲೀಸ್ ಕಾನ್ಸ್ ಟೇಬಲ್ ಗಳ ಹುದ್ದೆ ಖಾಲಿ ಇದೆ. ಈಗಾಗಲೇ 3,500 ಕಾನ್ಸ್ ಟೇಬಲ್ ಗಳ ನೇಮಕಾತಿಗೆ ನೋಟಿಫಿಕೇಷನ್ ಆಗಿದೆ. ಶೀಘ್ರವೇ ಮತ್ತೆ 5000 ಸಾವಿರ ಕಾನ್ಸ್ ಟೇಬಲ್ ಗಳ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಈ ವೇಳೆ ಮಾತನಾಡಿದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಕೋವಿಡ್ ಕಾರಣದಿಂದ ಕಾನ್ಸ್ ಟೇಬಲ್ ಗಳ ನೇಮಕಾತಿ ವಿಳಂಬ ಆಗಿದೆ ಹಾಗಾಗಿ ಕಾನ್ಸ್ ಟೇಬಲ್ ಗಳ ನೇಮಕಾತಿ ವಯೋಮಿತಿ ಹೆಚ್ಚಿಸುವಂತೆ ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಗೃಹ ಸಚಿವರು, ಸಾಮಾನ್ಯ ವರ್ಗಕ್ಕೆ 18-25 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ. ವಯೋಮಿತಿ ಹೆಚ್ಚಿಸುವಂತೆ ನನಗೂ ಹಲವರು ಮನವಿ ಮಾಡುತ್ತಿದ್ದಾರೆ. ಆದರೆ ಕೋವಿಡ್ ಸಂದರ್ಭದಲ್ಲಿ ಪೊಲಿಸ್ ಸೇನಮಾಕಾತಿ ನಿಂತಿರಲಿಲ್ಲ. ಕಾನ್ಸ್ ಟೇಬಲ್ ನೇಮಕಾತಿ ವಯೋಮಿತಿ ಹೆಚ್ಚಿಸುವ ಯೋಚನೆ ಸಧ್ಯಕ್ಕೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಉತ್ತರ ಕನ್ನಡ ಜಿಲ್ಲೆಯ ಜನರ ಕನಸು ನನಸು; ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸರ್ಕಾರದ ಸಮ್ಮತಿ

https://pragati.taskdun.com/politics/uttara-kannadasuper-speciality-hospitaldr-sudhakar/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button