Latest

ಟಾಯ್ಲೆಟ್ ನಲ್ಲಿಯೇ ಊಟ ರೆಡಿ ಮಾಡಿ ಮಹಿಳಾ ಆಟಗಾರ್ತಿಯರಿಗೆ ವಿತರಣೆ; ವಿಡಿಯೋ ವೈರಲ್

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕಬಡ್ಡಿ ಟೂರ್ನ ಮೆಂಟ್ ನಲ್ಲಿ ಶೌಚಾಲಯದಲ್ಲಿ ಬೇಯಿಸಿದ ಆಹಾರವನ್ನು ಕ್ರೀಡಾಪಟುಗಳಿಗೆ ನೀಡಿರುವ ಘಟನೆ ಉತ್ತರ ಪ್ರದೇಶದ ಸಹರಾನ್ ಪುರದಲ್ಲಿ ನಡೆದಿದೆ.

ಸಹರಾನ್ ಪುರದಲ್ಲಿ 17 ವರ್ಷದೊಳಗಿನ ಬಾಲಕಿಯರ ಕಬಡ್ಡಿ ಟೂರ್ನಮೆಂಟ್ ಆಯೋಜಿಸಲಾಗಿತ್ತು. ಈ ವೇಳೆ ಆಟಗಾರರಿಗೆ ಟಾಯ್ಲೆಟ್ ನಲ್ಲಿ ಇಟ್ಟಿದ್ದ ಆಹಾರ ಬಡಿಸಲಾಗಿದೆ ಎಂದು ವರದಿಯಾಗಿದೆ.

Home add -Advt

ಶೌಚಾಲಯದ ನೆಲದ ಮೇಲೆ ಬೇಯಿಸಿದ ಆಹಾರದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಬಗ್ಗೆ ಸಹರಾನ್ ಪುರ ಕ್ರೀಡಾಅಧಿಕಾರಿ ಆರೋಪ ತಳ್ಲಿಹಾಕಿದ್ದು, ಆಟಗಾರರಿಗೆ ಅತ್ಯುತ್ತಮ ಗುಣಮಟ್ತದ ಆಹಾರ ವಿತರಿಸಲಾಗಿದೆ ಎಂದಿದ್ದಾರೆ. ಆದರೆ ಆಟಗಾರರು ಕೂಡ ನಮಗೆ ನೀಡಿದ್ದ ಆಹಾರ ಗುಣಮಟ್ಟದ್ದಾಗಿರಲಿಲ್ಲ. ಆಹಾರ ತಯಾರಿಸಲು ಸ್ಥಳವಿಲ್ಲ ಎಂಬ ಕಾರಣಕ್ಕೆ ಟಾಯ್ಲೆಟ್ ಪಕ್ಕದ ಜಾಗದಲ್ಲಿಯೇ ತಯಾರಿಸಲಾಗಿತ್ತು ಎಂದು ಆರೋಪಿಸಿದ್ದಾರೆ.

ಕಾನ್ಸ್ ಟೇಬಲ್ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಆಗ್ರಹ; 5000 ಕಾನ್ಸ್ ಟೇಬಲ್ ಗಳ ಶೀಘ್ರ ನೇಮಕಾತಿ ಎಂದ ಗೃಹ ಸಚಿವ

https://pragati.taskdun.com/politics/police-constable-job5000-constablearaga-jnanendralakshmi-hebbalkar/

Related Articles

Back to top button