ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಫೋನ್ ರಿಸೀವ್ ಮಾಡಲಿಲ್ಲ ಎಂಬ ಕಾರಣಕ್ಕೆ ಪೊಲೀಸ್ ಪೇದೆಯೊಬ್ಬ ಬಾಣಂತಿ ಪತ್ನಿಯನ್ನೇ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯಲ್ಲಿ ನಡೆದಿದೆ.
ಕಿಶೋರ್ ಪತ್ನಿಯನ್ನೇ ಕೊಂದಿರುವ ಕಾನ್ಸ್ ಟೇಬಲ್. ಇತ್ತೀಚೆಗಷ್ಟೇ ಕಿಶೋರ್ ಪತ್ನಿ ಪ್ರತಿಭಾ ಹೆರಿಗೆಯಾಗಿದ್ದರು. ಕಿಶೋರ್ ಪತ್ನಿಗೆ ಹಲವು ಬಾರಿ ಫೋನ್ ಮಾಡಿದ್ದನಂತೆ. ಸುಮಾರು 150 ಬಾರಿ ಫೋನ್ ಮಾಡಿದರೂ ಪತ್ನಿ ರಿಸೀವ್ ಮಾಡಿರಲಿಲ್ಲವಂತೆ. ಇದೇ ಕಾರಣಕ್ಕೆ ಕೋಪಗೊಂಡ ಕಿಶೋರ್ 230 ಕೀ.ಮೀ ದೂರ ಆಕೆ ಇರುವಲ್ಲಿಗೆ ಬಂದು ಕೊಲೆ ಮಾಡಿದ್ದಾನೆ.
ತನ್ನ ಫೋನ್ ಕರೆ ತೆಗೆದುಕೊಂಡಿಲ್ಲ ಎಂಬ ಕಾರಣಕ್ಕೆ ಪತ್ನಿ ಮೇಲೆ ಅನುಮಾನಗೊಂಡು ನೇರವಾಗಿ ಅತ್ತೆ ಮನೆಗೆ ಬಂದು ಪತ್ನಿಯನ್ನು ಕತ್ತು ಹಿಸುಕಿ ಕೊಂದಿದ್ದಾನೆ. ಪುಟ್ಟ ಕಂದಮ್ಮನ ಮುಂದೆಯೇ ಈ ಕೃತ್ಯವೆಸಗಿದ್ದಾನೆ.
ಕಿಶೋರ್ ಪತ್ನಿಯನ್ನು ಅನುಮಾನಿಸುತ್ತಿದ್ದಂತೆ. ಆಗಾಗ ಆಕೆಯ ಫೋನ್ ಎತ್ತಿಕೊಂಡು ಕರೆ, ಮೆಸೆಜ್ ಗಳನ್ನು ಪರಿಶೀಲಿಸುತ್ತಿದ್ದನಂತೆ ಗರ್ಭಿಣಿಯಾಗಿದ್ದ ಪ್ರತಿಭಾ ತವರಿಗೆ ಬಂದ ಮೇಲೂ ಕರೆ ಮಾಡಿ ಕಿರುಕುಳ ಕೊಡುತ್ತಿದ್ದಂತೆ. ಇತ್ತೀಚೆಗಷ್ಟೇ ಪ್ರತಿಭಾ ಮಗುವಿಗೆ ಜನ್ಮ ನೀಡಿದ್ದರು. ಆಗಾಗ ಫೋನ್ ಮಾಡಿ ಅನಗತ್ಯವಾಗಿ ಬೈದಾಡುತ್ತಿದ್ದ ಕಿಶೋರ್ ನಡೆಗೆ ಬಾಣಂತಿ ಪ್ರತಿಭಾ ಕಣ್ಣೀರಿಟ್ಟಿದ್ದರಂತೆ. ಮಗಳ ನೋವು ಕಂಡು ಪ್ರತಿಭಾ ತಾಯಿ ಮಗುವಿನ ಆರೋಗ್ಯದ ಮೇಲೂ ಪರುಣಾಮ ಬೀರುತ್ತೆ. ಸಮಾಧಾನವಾಗಿರು. ಫೋನ್ ನನ್ನ ಕೈಲಿಕೊಡು ಎಂದು ಮೊಬೈಲ್ ಎತ್ತಿ ಇಟ್ಟಿದ್ದರಂತೆ. ಇದೇ ವೇಳೆ ಕಿಶೋರ್ ಪತ್ನಿಗೆ 150 ಬಾರಿ ಕರೆ ಮಾಡಿದ್ದಾನೆ. ಆತ ಕರೆ ಮಾಡಿದ್ದು ಪತ್ನಿಗೆ ಗೊತ್ತಾಗಿಲ್ಲ. ಫೋನ್ ರಿಸೀವ್ ಮಾಡಿಲ್ಲ ಎಂದು ಕೋಪಗೊಂಡ ಕಿಶೋರ್ ಸೀದಾ ಅತ್ತೆ ಮನೆಗೆ ಧಾವಿಸಿ ಬಂದು ಪತ್ನಿಯನ್ನು ಕೊಂದೇಬಿಟ್ಟಿದ್ದಾನೆ. ಬಳಿಕ ತಾನೂ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಕಿಶೋರ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ