ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ಕೌಟುಂಬಿಕ ಜಗಳ ಪೊಲೀಸ್ ಕಾನ್ಸ್ ಟೇಬಲ್ ನಿಂದಲೇ ಕೊಲೆಯಲ್ಲಿ ಅಂತ್ಯವಾದ ಘಟನೆ ನಡೆದಿದೆ. ಪೊಲೀಸ್ ಕಾನ್ಸ್ ಟೇಬಲ್ ತನ್ನ ಅತ್ತೆಯನ್ನೇ ಗುಂಡುಟ್ಟು ಹತ್ಯೆ ಮಾಡಿರುವ ಘಟನೆ ಆಂಧ್ರಪ್ರದೇಶದ ಹನುಮಕೊಂಡ ಜಿಲ್ಲೆಯಲ್ಲಿ ನಡೆದಿದೆ.
ರಾಮಗುಂಡ್ಲಂ ಕಮಿಷನರೇಟ್ ವ್ಯಾಪ್ತಿಯ ತೋಟಪಲ್ಲಿ ಠಾಣೆಯ ಪೊಲೀಸ್ ಕಾನ್ಸ್ ಟೇಬಲ್ ಪ್ರಸಾದ್ ಕೊಲೆ ಆರೋಪಿ. ಪ್ರಸಾದ್ ಹನುಮಕೊಂಡ ಜಿಲ್ಲೆಯ ಗುಂಡ್ಲಸಿಂಗಾರಂ ಪ್ರದೇಶದ ರಮಾ ಎಂಬುವವರನ್ನು ವಿವಾಹವಾಗಿದ್ದ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇಂದು ಅತ್ತೆಯ ಮನೆಗೆ ಬಂದ ಪ್ರಸಾದ್, ಜಗಳ ಮಾಡಿದ್ದಾನೆ. ಅತ್ತೆ-ಅಳಿಯನ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ರಿವಾಲ್ವರ್ ತೆಗೆದು ಅತ್ತೆಅ ಮೇಲೆ ಎರಡು ಸುತ್ತು ಗುಂಡಿನ ದಾಳಿ ನಡೆಸಿದ್ದಾನೆ.
ಗುಂಡೇಟಿಗೆ ಕುಸಿದುಬಿದ್ದ ಅತ್ತೆಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಕಂಡ ಸ್ಥಳೀಯರು ಪೊಲೀಸ್ ಕಾನ್ಸ್ ಟೇಬಲ್ ಪ್ರಸಾದ್ ಮೇಲೆ ಕಲ್ಲು ಎಸೆದು ಹಲ್ಲೆ ನಡೆಸಿದ್ದಾರೆ. ಬಳಿಕ ಆತನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಸಾರ್ವಜನಿಕರಿಂದ ಥಳಿತಕ್ಕೊಳಗಾದ ಪ್ರಸಾದ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ. ಸ್ಥಳೀಯರು ಹೇಳುವ ಪ್ರಕಾರ, ಪ್ರಸಾದ್ ಗೆ ಕುಡಿತದ ಚಟವಿತ್ತು. ಪತಿಯ ಕುಡಿತದಿಂದ ಬೇಸತ್ತಿದ್ದ ಪತ್ನಿ ತನ್ನ ಮಕ್ಕಳೊಂದಿಗೆ ತಾಯಿ ಮನೆಗೆ ಬಂದು ವಾಸವಾಗಿದ್ದರು.
ಇಂದು ಅತ್ತೆಯ ಮನೆಗೆ ಬಂದ ಪ್ರಸಾದ್, ಅತ್ತೆ ಜೊತೆ ಜಗಳವಾಡಿದ್ದಾನೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಸರ್ವಿಸ್ ರಿವಾಲ್ವರ್ ನಿಂದ ಗುಂಡು ಹಾರಿಸಿದ್ದಾನೆ. ಆದರೆ ಪ್ರಸಾದ್ ಕೈಗೆ ಸರ್ವಿಸ್ ರಿವಾಲ್ವರ್ ಸಿಕ್ಕಿದ್ದು ಹೇಗೆ? ಠಾಣೆಯಿಂದಲೇ ತೆಗೆದುಕೊಂಡು ಬಂದಿದ್ದನಾ? ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ