
ಪ್ರಗತಿವಾಹಿನಿ ಸುದ್ದಿ; ಹಾವೇರಿ: ಅಕ್ರಮವಾಗಿ ಆಟೋ ರಿಕ್ಷಾದಲ್ಲಿ ತರುತ್ತಿದ್ದ 250 ಕೆಜಿ ಎಮ್ಮೆ ಮಾಂಸ ಹಾಗೂ ಆಟೊವನ್ನು ಶಿರಸಿಯ ಕಸ್ತೂರಬಾ ನಗರದಲ್ಲಿ ಪೊಲೀಸರು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳು ಹಾವೇರಿ ಜಿಲ್ಲೆಯ ಅಕ್ಕಿ ಆಲೂರಿನಿಂದ ಶಿರಸಿಗೆ ಮಾರಾಟ ಮಾಡಲು ಅಕ್ಕಿಆಲೂರಿನಿಂದ ಎಮ್ಮೆ ಮಾಂಸವನ್ನು ದಾಸನಕೊಪ್ಪ, ಕೊರ್ಲಕಟ್ಟಾ ಮಾರ್ಗವಾಗಿ ಶಿರಸಿಗೆ ತರುತ್ತಿದರು. ಖಚಿತ ಮಾಹಿತಿ ಮೇರೆಗೆ ಆಟೋ ರಿಕ್ಷಾ ಕಸ್ತೂರಬಾ ನಗರಕ್ಕೆ ಬರುತ್ತಿದ್ದಂತೆ ಪೋಲಿಸರು ದಾಳಿ ನಡೆಸಿದ್ದರು. ಆರೋಪಿಗಳಾದ ಖಾಜಾಮುದ್ದಿನ್ ಅಲ್ಲಾಭಕ್ಷ ಬೇಪಾರಿ, ಅಲ್ತಾಪ್ ಲಾಲಸಾಬ್ ಮುಲ್ಲಾ, ಮಂಜುನಾಥ ಶಂಕ್ರಪ್ಪ ಬಾರ್ಕಿ ಬಂಧಿತ ಆರೋಪಿಗಳು.
ಶಿರಸಿ ಸಿಪಿಐ ರಾಮಚಂದ್ರ ನಾಯಕ ನಿರ್ದೇಶನದಲ್ಲಿ ಪಿಎಸ್‌ಐ ಭೀಮಾಶಂಕರ್ ಸಿನ್ನೂರ ಸಂಗಣ್ಣ, ಸಿಬ್ಬಂದಿ ಮಂಜುನಾಥ ಕೆಂಚರೆಡ್ಡಿ, ರೋನಾಲ್ಡ್ ಅಲ್ಮೇಡಾ, ಹನುಮಂತ ಮಾಕಾಪುರ, ಸುರೇಶ ಗಜಬರ, ಪ್ರದೀಪ ಕೈಟಕರ್, ಮೋಹನ ಕೆ. ನಾಯ್ಕ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಡಾ.ಸೌಂದರ್ಯ ಆತ್ಮಹತ್ಯೆ; ಮರಣೋತ್ತರ ಪರೀಕ್ಷಾ ವರದಿ ಹೇಳುವುದೇನು?