Kannada NewsKarnataka NewsPolitics

*ಗೃಹ ಸಚಿವರ ಜನತಾ ದರ್ಶನದ ವೇಳೆ ಕೆ‌ಆರ್‌ಎಸ್ ಪಕ್ಷದ ಮುಖಂಡನನ್ನು ಎಳೆದೊಯ್ದ ಪೊಲೀಸರು*

ಪ್ರಗತಿವಾಹಿನಿ ಸುದ್ದಿ: ತುಮಕೂರಿನಲ್ಲಿ ಜನತಾ ದರ್ಶನ ನಡೆಸುತ್ತಿದ್ದ‌ ಗೃಹ ಸಚಿವ ಜಿ.ಪರಮೇಶ್ವರ್‌ಗೆ ಮನವಿ ಕೊಡಲು ಬಂದಿದ್ದ ಕೆ‌ಆರ್‌ಎಸ್ ಪಕ್ಷದ ಮುಖಂಡನನ್ನು ಪೊಲೀಸರು ಧರಧರನೇ ಎಳೆದೊಯ್ದಿರುವ ಘಟನೆ ನಡೆದಿದೆ.

ಕೆಎಸ್ಆರ್ ಪಕ್ಷ ಮುಖಂಡರಿಗೆ ನೋಂದಣಿ ಮಾಡಿಕೊಂಡರೂ ಅರ್ಜಿಯನ್ನು ನೀಡಲು ಅವಕಾಶ ಕೊಟ್ಟಿರಲಿಲ್ಲ. ಅಲ್ಲದೇ ಗೃಹ ಸಚಿವರು ಸಭೆ ಮುಗಿಸಿ ಹೊರಟು ನಿಂತರು. ಈ ವೇಳೆ ಅಲ್ಲಿ ಹೈ ಡ್ರಾಮಾ‌ ಸೃಷ್ಟಿಯಾಯಿತು.

ಗೃಹ ಸಚವ ಪರಮೇಶ್ವರ ಅವರಿಗೆ  ಕೆಆರ್‌ಎಸ್ ಪಕ್ಷದ ಮಲ್ಲಿಕಾರ್ಜುನ್ ಗೃಹ‌ ಸಚಿವರಿಗೆ ಮನವಿ ಕೊಟ್ಟರು. ಆಗ ಕೆಆರ್‌ಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಸೋಮಸುಂದರ್ ಫೇಸ್ಬುಕ್ ಲೈವ್ ಕೊಡುತ್ತಿದ್ದರು. ಲೈವ್ ನಿಲ್ಲಿಸುವಂತೆ ಗೃಹ‌ ಸಚಿವರು ಸೂಚಿಸಿದರು.‌ ಆದಾಗ್ಯೂ ಲೈವ್ ನಿಲ್ಲಿಸಲಿಲ್ಲ. ಇದರಿಂದ ಗರಂ‌ ಆದ ಪೊಲೀಸರು ಸೋಮಸುಂದರ್‌ರನ್ನು ಧರಧರನೆ ಎಳೆದುಕೊಂಡು ಹೋಗಿ ವಶಕ್ಕೆ ಪಡೆದಿದ್ದಾರೆ.

ಕೆಆರ್‌ಎಸ್ ಪಕ್ಷದ ಮಲ್ಲಿಕಾರ್ಜುನ್ ಅವರು, ತುಮಕೂರು ಡಿಸಿ ಶುಭಾ ಕಲ್ಯಾಣ್ ಹಾಗೂ ಎಸ್ಪಿ ಅಶೋಕ ಎರಡೂವರೆ ವರ್ಷ ಆದರೂ ವರ್ಗಾವಣೆ ಆಗದೇ ಜಿಲ್ಲೆಯಲ್ಲೇ ಠಿಕಾಣಿ ಹೂಡಿರೋದನ್ನು ಆಕ್ಷೇಪಿಸಿ ಇವರು ಮನವಿ ತಂದಿದ್ದರು ಎನ್ನಲಾಗಿದೆ. 

Home add -Advt

Related Articles

Back to top button