Kannada NewsKarnataka NewsLatest
ಖಾನಾಪುರಕ್ಕೆ ಹೊಸ ಬಿಇಒ

ಪ್ರಗತಿವಾಹಿನಿ ಸುದ್ದಿ, ಖಾನಾಪುರ – ಖಾನಾಪುರ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಲಕ್ಷ್ಮಣರಾವ್ ಯಕ್ಕುಂಡಿ ಅಧಿಕಾರ ಸ್ವೀಕರಿಸಿದರು.
ಕಳೆದ ಅನೇಕ ತಿಂಗಳುಗಳಿಂದ ಖಾನಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಸ್ಥಾನ ಖಾಲಿ ಇತ್ತು. ಈ ಹಿಂದೆ ಇದ್ದ ಶಿಕ್ಷಣಾಧಿಕಾರಿಗಳು ಧಾರವಾಡದ ಡೈಯಟ್ ಗೆ ವರ್ಗಾವಣೆಗೊಂಡ ನಂತರ ಈ ಸ್ಥಾನ ಭರ್ತಿಯಾಗದೆ ಉಳಿದಿತ್ತು. ಕೆಲ ಸಮಯ ಪ್ರಭಾರಿಯಾಗಿ ಅಧಿಕಾರಿಯನ್ನು ನೇಮಕ ಮಾಡಲಾಗಿತ್ತು. ಆದರೆ ಈಗ ಖಾಯಂ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಲಕ್ಷ್ಮಣರಾವ ಯಕ್ಕುಂಡಿ ಅವರನ್ನು ನೇಮಕ ಮಾಡಲಾಗಿದೆ.
ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಲಕ್ಷ್ಮಣರಾವ್ ಯಕ್ಕುಂಡಿ ಅವರು ಶಾಸಕಿ ಡಾ. ಅಂಜಲಿ ನಿಂಬಾಳ್ಕರ ಅವರನ್ನು ಭೇಟಿ ಮಾಡಿ, ಪರಿಚಯಿಸಿಕೊಂಡರು.




