*ಹೇರಾಯಿನ್ ಮಾರಾಟ ಜಾಲ ಪತ್ತೆ ಮಾಡಿದ ಪೊಲೀಸರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಪೊಲೀಸರು ಸಸತವಾಗಿ ಕಾರ್ಯಾಚರಣರ ಮಾಡುವ ಮೂಲಕ ಹೇರಾಯಿನ್ ಮಾರಾಟ ಜಾಲವನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಹಲವಾರು ದಿನಗಳಿಂದ ಡ್ರಗ್ಸ್ ಮಾಫಿಯಾ ವಿರುದ್ಧ ಸಮರ ಸಾರಿರುವ ಬೆಳಗಾವಿ ಪೊಲೀಸರು ಇಂದು ಹೇರಾಯಿನ್ ಡ್ರಗ್ಸ್ ಮಾರಾಟದ ಜಾಲವನ್ನು ಪತ್ತೆ ಮಾಡಿದ್ದಾರೆ. ಬೆಳಗಾವಿಯ ತಿಲಕವಾಡಿ ಠಾಣೆಯ ಪೊಲೀಸರು 5 ಗ್ರಾಂ 50 ಮೀ ಹೇರಾಯಿನ್ ಪತ್ತೆ ಮಾಡಿ,ಇದನ್ನು ಮಾರಾಟ ಮಾಡುತ್ತಿದ್ದ ಐದು ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಾದ, ಪ್ರಫುಲ್ ಗಜಾನನ ಪಾಟೀಲ, ಸುಶಾಂತ ಗೋವೀಂದ್ ಕಂಗ್ರಾಳಕರ್, ನಾರಾಯಣ ಬಾಬುರಾವ್ ಪಾಟೀಲ,ಸುನೀಲ ಬೈರು ಅಸಲ್ಕರ್, ಸಲ್ಮಾನ್ ಬಬ್ಬರ್ ಮೊಕಾಶಿ ಇವರನ್ನು ಬಂಧಿಸಲಾಗಿದ್ದು, ಬಂಧಿತ ಐದು ಜನ ಆರೋಪಿಗಳು ಬೆಳಗಾವಿಯ ಅನಗೋಳ ಪ್ರದೇಶದ ನಿವಾಸಿಗಳಾಗಿದ್ದಾರೆ.
ಬೆಳಗಾವಿಯಲ್ಲಿ ಗಾಂಜಾ ಸೇರಿದಂತೆ ಇನ್ನಿತರ ಮಾದಕ ವಸ್ತುಗಳ ಮಾರಾಟದ ವಿಚಾರವನ್ನು ಗಂಭೀರವಾಗಿ ಪರಗಣಿಸಿರುವ ಬೆಳಗಾವಿ ನಗರ ಪೋಲೀಸ್ ಆಯುಕ್ತ ಮಾರ್ಟಿನ್ ಅವರು ನಗರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ