ಪ್ರಗತಿ ವಾಹಿನಿ ಸುದ್ದಿ; ನವದೆಹಲಿ: ವೇಗವಾಗಿ ಕಾರ್ ಚಲಾಯಿಸಬೇಡ ಎಂದು ಬುದ್ಧಿವಾದ ಹೇಳಿದ ಪಿಎಸ್‌ಐ ಒಬ್ಬರಿಗೆ ಕಾರ್ ಚಾಲನೆ ಮಾಡುತ್ತಿದ್ದ ಯುವಕ ಚಾಕುವಿನಿಂದ ಇರಿದು ಗಾಯಗೊಳಿಸಿದ ಘಟನೆ ದೆಹಲಿಯ ಕುಂಜ್‌ವಾಲಾ ಪೊಲೀಸ್ ಸ್ಟೇಶನ್ ವ್ಯಾಪ್ತಿಯಲ್ಲಿ ನಡೆದಿದೆ. ಚೇತನ್‌ಕುಮಾರ್ ಗಾಯಗೊಂಡ ಪೊಲೀಸ್ ಅಧಿಕಾರಿ.
ಚೇತನ್ ಕುಮಾರ್ ಚಾಕು ಇರಿತಕ್ಕೆ ಒಳಗಾದವರು. ಚೇತನ್‌ಕುಮಾರ್ ಕುಂಜ್‌ವಾಲಾದ ಮಾರ್ಕೇಟ್‌ಗೆ ತಮ್ಮ ಪತ್ನಿ ಮತ್ತು ೫ ವರ್ಷದ ಮಗಳೊಂದಿಗೆ ಬಂದಿದ್ದರು. ಈ ವೇಳೆ ಜನನಿಬಿಡ ಮಾರ್ಕೇಟ್‌ನ ರಸ್ತೆಯಲ್ಲಿ ಯುವಕನೊಬ್ಬ ಯದ್ವಾತದ್ವಾ ಕಾರ್ ಚಾಲನೆ ಮಾಡಿಕೊಂಡುಬAದಿದ್ದಾನೆ. ಕಾರ್ ತಡೆದ ಚೇತನ್‌ಕುಮಾರ್ ನಿಧಾನವಾಗಿ ಚಾಲನೆ ಮಾಡುವಂತೆ ಬುದ್ದಿ ಹೇಳಿದ್ದಾರೆ. ಆದರೆ ಚೇತನ್ ಕುಮಾರ್ ಜೊತೆ ಜಗಳಕ್ಕಿಳಿದ ಯುವಕ ಅವರಿಗೆ ಚಾಕುವಿನಿಂದ ಇರಿದಿದ್ದಾನೆ.
ಮಾರ್ಕೇಟ್‌ನಲ್ಲಿದ್ದ ಜನ ಘಟನಾ ಸ್ಥಳದಲ್ಲಿ ಸೇರುತ್ತಿದ್ದಂತೆ ಆರೋಪಿ ಯುವಕ ಪರಾರಿಯಾಗಿದ್ದಾನೆ. ಚೇತನ್‌ಕುಮಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು ಅವರು ಚೇತರಿಸಿಕೊಂಡಿದ್ದಾರೆ. ಆರೋಪಿ ಯುವಕನಿಗಾಗಿ ಬಲೆ ಬೀಸಲಾಗಿದೆ ಎಂದು ಕುಂಜ್‌ವಾಲಾ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ನಡುವೆ ದೇಶವನ್ನುದ್ದೇಶಿಸಿ ಮಾತನಾಡಿರುವ ಇಮ್ರಾನ್ ಖಾನ್, ತಮ್ಮ ವಿರುದ್ಧ ವಿದೇಶಿ ಷಡ್ಯಂತ್ರ ನಡೆಯುತ್ತಿದ್ದು, ಇದನ್ನು ಸಹಿಸಲು ಸಾಧ್ಯವಿಲ್ಲ, ಚುನಾಯಿತ ಸರ್ಕಾರವನ್ನು ಉರುಳಿಸುವ ಷಡ್ಯಂತ್ರ ನಡೆದಿದೆ. ಇದಕ್ಕೆ ಅವಕಾಶ ನೀಡುವುದಿಲ್ಲ. ಚುನಾವಣೆಯನ್ನು ಎದುರಿಸಲು ಸಜ್ಜಾಗಿ ಯಾವುದೇ ಚುನಾಯಿತ ಸರ್ಕಾರವನ್ನು ಉರಿಳಿಸಲು ಬಿಡಲ್ಲ. ವಿದೇಶಿ ಶಕ್ತಿ ವಿಫಲಗೊಳಿಸಿದ್ದೇವೆ.
ಆಮ್ ಆದ್ಮಿ ಪಕ್ಷ ಸೇರ್ಪಡೆಗೆ ಭಾಸ್ಕರ್ ರಾವ್ ನಿರ್ಧಾರ: ಕೇಜ್ರಿವಾಲ್ ಸಮ್ಮುಖದಲ್ಲಿ ನಾಳೆಯೇ ಆಪ್ ಗೆ ಸೇರ್ಪಡೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ