Latest

ಅತ್ಯಾಚಾರ: ದೂರು ದಾಖಲಿಸಿಲು ಠಾಣೆಗೆ ಬಂದ ಅಪ್ರಾಪ್ತೆ ಮೇಲೆ ಪೊಲೀಸ್ ಅಧಿಕಾರಿಯಿಂದಲೇ ಅತ್ಯಾಚಾರ

ಪ್ರಗತಿವಾಹಿನಿ ಸುದ್ದಿ; ಲಕ್ನೋ: ಅತ್ಯಾಚಾರ ದೂರು ದಾಖಲಿಸಲು ಠಾಣೆಗೆ ತೆರಳಿದ್ದ ಅಪ್ರಾಪ್ತ ಬಾಲಕಿ ಮೇಲೆ ಪೊಲೀಸರೇ ಮತ್ತೆ ಅತ್ಯಾಚಾರ ನಡೆಸಿರುವ ಅಮಾನುಷ ಘಟನೆ ಉತ್ತರಪ್ರದೇಶದ ಲಲಿತಪುರದಲ್ಲಿ ಬೆಳಕಿಗೆ ಬಂದಿದೆ.

13 ವರ್ಷದ ಬಾಲಕಿ ಮೇಲೆ ಕಾಮಾಂಧನೊಬ್ಬ ಅಟ್ಟಹಾಸ ಮೆರೆದಿದ್ದು, ಈ ಬಗ್ಗೆ ದೂರು ನೀಡಲು ಸಂತ್ರಸ್ತ ಬಾಲಕಿ ತನ್ನ ಸಂಬಂಧಿಕರೊಂದಿಗೆ ಪೊಲೀಸ್ ಠಾಣೆಗೆ ಬಂದಿದ್ದಾಳೆ. ಆದರೆ ದುರುಳ ಪೊಲೀಸ್ ಅಧಿಕಾರಿಯೊಬ್ಬ ದೂರು ನೀಡಲು ಬಂದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ.

ಆರೋಪಿಯನ್ನು ಠಾಣಾಧಿಕಾರಿ ತಿಲಕ್ ಧಾರಿ ಸರೋಜ್ ಎಂದು ತಿಳಿದುಬಂದಿದ್ದು, ಆತನನ್ನು ಅಮಾನತುಗೊಳಿಸಿ, ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಅಧಿಕಾರಿ ನಾಪತ್ತೆಯಾಗಿದ್ದು, ಪತ್ತೆಗಾಗಿ ಮೂರು ಪೊಲೀಸ್ ತಂದ ರಚಿಸಲಾಗಿದೆ ಎಂದು ಲಲಿತಪುರ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಬಾಲಕಿಯನ್ನು ನಂಬಿಸಿ ಆಮಿಷವೊಡ್ಡಿ ಏ.22ರಂದು ಕೆಲ ದುರುಳರು ಭೋಪಾಲ್ ಗೆ ಕರೆದೊಯ್ದಿದ್ದರು. ನಾಲ್ಕು ದಿನಗಳ ಕಾಲ ಆಕೆ ಮೇಲೆ ಅತ್ಯಾಚಾರ ಎಸಗಿದ್ದಾರೆ, ಬಳಿಕ ಆಕೆಯನ್ನು ವಾಪಸ್ ಕರೆತಂದು ಗ್ರಾಮದ ಪೊಲೀಸ್ ಠಾಣೆ ಬಳಿ ಬಿಟ್ಟು ಹೋಗಿದ್ದಾರೆ. ಬಾಲಕಿಯನ್ನು ಪೊಲೀಸರು ಆಕೆಯ ಚಿಕ್ಕಮ್ಮನಿಗೆ ಒಪ್ಪಿಸಿದ್ದಾರೆ.

ಮಾರನೆ ದಿನ ಬಾಲಕಿ ತನ್ನ ಚಿಕ್ಕಮ್ಮನ ಜತೆ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದಾಳೆ. ಈ ವೇಳೆ ವಿಚಾರಣೆಗೆಂದು ಕೋಣೆಯೊಳಗೆ ಬಾಲಕಿ ಕರೆದೊಯ್ದ ಪೊಲೀಸ್ ಅಧಿಕಾರಿ ಅತ್ಯಾಚಾರ ನಡೆಸಿದ್ದಾನೆ. ಪೊಲೀಸ್ ಅಧಿಕಾರಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿ ನಿಖಿಲ್ ಪಾಠಕ್ ತಿಳಿಸಿದ್ದಾರೆ.

ಪಿಎಸ್ ಐ ನೇಮಕಾತಿ ಅಕ್ರಮ; ಪೊಲೀಸರಿಂದಲೇ ಹಗರಣ ಬಯಲು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button