ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಎಸ್ಪಿ ಸಂಜೀವ್ ಪಾಟೀಲ ಆರಂಭಿಸಿರುವ ಫೋನ್ ಇನ್ ಕಾರ್ಯಕ್ರಮದ 6ನೇ ಕಾರ್ಯಕ್ರಮದಲ್ಲೂ ಅಕ್ರಮ ಮದ್ಯದ ಘಾಟು ಜೋರಾಗಿತ್ತು. ಬಂದಿದ್ದ 51 ಕರೆಗಳ ಪೈಕಿ ಅಗ್ರಸ್ಥಾನ ಅಕ್ರಮ ಮದ್ಯದ ಸಮಸ್ಯೆಗೆ.
ಪೊಲೀಸರು ಸಾರ್ವಜನಿಕರ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಆರಂಭಿಸಿರುವ ಪೋನ್ ಇನ್ ಕಾರ್ಯಕ್ರಮದ ಆರನೇ ಕಾರ್ಯಕ್ರಮ ಗುರುವಾರ ನಡೆಯಿತು.
ಬೆಳಗಾವಿ ಜಿಲ್ಲೆಯ ಜನರು ಪೋನ್ ಮಾಡಿ ತಮ್ಮ ಅಳಲನ್ನು ತೋಡಿಕೊಂಡರು. ಒಟ್ಟೂ 51 ಕರೆಗಳನ್ನು ಸ್ವೀಕರಿಸಲಾಗಿದ್ದು, 11 ಕರೆಗಳು ಅಕ್ರಮ ಮದ್ಯಕ್ಕೆ ಸಂಬಂಧಿಸಿದ್ದು.
ನಾಗನೂರು ಗ್ರಾಮದಲ್ಲಿ ಕಳೆದ 22 ರಂದು ಭಾನುವಾರ ಕೊಲೆಯಾಗಿದೆ. ಪೊಲೀಸರು ಆರೋಪಿಗಳನ್ನು ಹಿಡಿದ್ದಾರೆ. ಅದೇ ಸ್ಥಳದಲ್ಲಿ ಸುಮಾರು ಐದು ಕೊಲೆಗಳು ನಡೆದಿವೆ. ಇದರ ತನಿಖೆ ನಡೆಸುವಂತೆ ಎಸ್ಪಿ ಅವರಿಗೆ ದೂರಿದರು. ಇದಕ್ಕೆ ಸ್ಪಂದಿಸಿದ ಎಸ್ಪಿ ನಿಖರವಾಗಿ ಯಾರು ಕೊಲೆಯಾಗಿದ್ದಾರೆ ಎನ್ನುವ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳಲಾಗುವುದು. ಸೂಕ್ತ ಮಾಹಿತಿ ನೀಡುವಂತೆ ತಿಳಿಸಿದರು. ಅಲ್ಲದೆ, ಕೊಲೆಯಾದ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.
ಅಥಣಿ ತಾಲೂಕಿನ ನಂದೇಶ್ವರ ಗ್ರಾಮದಲ್ಲಿ ಅಕ್ರಮವಾಗಿ ಸರಾಯಿ ಮಾರಾಟ ಹಾಗೂ ವ್ಯಕ್ತಿಯೋರ್ವ ಹಾಲಿನಲ್ಲಿ ನೀರು ಬೆರೆಸುತ್ತಿದ್ದಾನೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಅವರು ಅಕ್ರಮವಾಗಿ ಮಾರಾಟ ಮಾಡುತ್ತಿರುವ ಸರಾಯಿ ಬಂದ್ ಮಾಡಿಸುವುದಾಗಿ ತಿಳಿಸಿದರು.
ರಾಯಬಾಗ ತಾಲೂಕಿನ ಚಿಂಚಲಿ ಜಾತ್ರೆಯಲ್ಲಿ ಕಳ್ಳತನ, ದರೋಡೆ ನಡೆಯುವುದರಿಂದ ಹೆಚ್ಚಿನ ಪೊಲೀಸ್ ಭದ್ರತೆ ನೀಡಬೇಕೆಂದು ಮನವಿ ಮಾಡಿಕೊಂಡರು.
ಅಥಣಿ ತಾಲೂಕಿನ ಕೆಎಸ್ಆರ್ ಟಿಸಿ ವಾಹನ ಚಾಲಕರಾಗಿರುವ ನನ್ನ ಪತಿ ಕಾಣೆಯಾಗಿದ್ದಾರೆ. ಹುಡುಕಿ ಕೊಡುವಂತೆ ಚಾಲಕನ ಪತ್ನಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಸಂಜೀವ ಪಾಟೀಲ ಅವರು, ಸಂಜೆಯವರೆಗೆ ಸಮಯ ಕೊಡಿ ಪತ್ತೆ ಮಾಡಿ ತಿಳಿಸಲಾಗುವುದು ಎಂದರು.
ಬೈಲಹೊಂಗಲ ತಾಲೂಕಿನ ಮಹಿಳೆಯೋರ್ವಳು ಕರೆ ಮಾಡಿ ವ್ಯಕ್ತಿಯೋರ್ವ ಕಾಣೆಯಾಗಿದ್ದಾನೆ. ಈ ಕುರಿತು ಬೈಲಹೊಂಗಲ ಹಾಗೂ ದೊಡವಾಡ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಇಲ್ಲಿಯವರಗೆ ದೂರು ದಾಖಲಿಸುತ್ತಿಲ್ಲ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಸಂಬಂಧಿಸಿದ ಪೊಲೀಸ್ ಠಾಣೆಗೆ ಹೊಗಿ ದೂರು ನೀಡಿ ಎಫ್ಐಆರ್ ದಾಖಲಿಸಿಕೊಳ್ಳಲು ಸೂಚಿಸುತ್ತೇನೆ ಎಂದರು.
ಕಾಕತಿಯಲ್ಲಿ ಕಂಟ್ರಿ ಸರಾಯಿ ಹಾಗೂ ಮಟ್ಕಾ ಹೆಚ್ಚಾಗಿ ನಡೆಯುತ್ತಿದೆ. ಇದರ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಎಸ್ಪಿ ಅವರಿಗೆ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಅವರು ಈ ಮಾಹಿತಿಯನ್ನು ನಗರ ಪೊಲೀಸ್ ಇಲಾಖೆಗೆ ತಿಳಿಸಲಾಗುವುದು ಎಂದರು.
ಅಕ್ರಮ ಸರಾಯಿ ಮರಾಟ, ಹಣ ಕೊಟ್ಟವರಿಂದ ಮೋಸ, ಅಕ್ರಮ ಮರಳು ಸಾಗಾಟ ಸೇರಿದಂತೆ ಇನ್ನಿತರ ಸಮಸ್ಯೆ ಹೇಳಿಕೊಂಡು ಎಸ್ಪಿ ಅವರಿಗೆ ದೂರು ನೀಡಿದರು.
ಎಸ್ಪಿ ಫೋನ್ ಇನ್ ಮೊದಲ ಕಾರ್ಯಕ್ರಮದಲ್ಲಿ 72 ಕರೆಗಳು, ಎರಡನೇ ಫೋನ್ ಇನ್ ನಲ್ಲಿ 65, ಮೂರನೇ ಫೋನ್ ಇನ್ ನಲ್ಲಿ 58, ನಾಲ್ಕನೇ ಫೋನ್ ಇನ್ ನಲ್ಲಿ 62, ಐದನೇ ಫೋನ್ ಇನ್ ನಲ್ಲಿ 56 ಹಾಗೂ ಆರನೇ ಫೋನ್ ಇನ್ ನಲ್ಲಿ 51, ಒಟ್ಟು 330 ಕರೆಗಳನ್ನು ಸ್ವೀಕರಿಸಿದ್ದಾರೆ.
ಈ ಸಂದರ್ಭದಲ್ಲಿ ಪೊಲೀಸ್ ಇನಸ್ಪೆಕ್ಟರ್‌ಗಳಾದ ಬಿ.ಆರ್.ಗಡ್ಡೇಕರ್, ಮಹಾದೇವ ಎಸ್.ಎಂ., ಬಾಳಪ್ಪ ತಳವಾರ, ವಿಠ್ಠಲ ಮಾದರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ –
ಬೆಳಗಾವಿ PSI ಹೆಸರಲ್ಲಿ ನಕಲಿ ಇನ್ಸ್ಟಾಗ್ರಾಂ ಅಕೌಂಟ್ : 50ಕ್ಕೂ ಹೆಚ್ಚು ಮಹಿಳೆಯರ ಸ್ನೇಹ ಬೆಳೆಸಿ ವಂಚನೆ; ಆರೋಪಿ ಬಂಧನ
https://pragati.taskdun.com/fake-instagram-account-in-the-name-of-belgaum-psi-befriended-and-scammed-more-than-50-women-accused-arrested/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ