
ಪ್ರಗತಿವಾಹಿನಿ ಸುದ್ದಿ, ಚಿತ್ರದುರ್ಗ: ಜಿಲ್ಲೆಯ ಅಡವಿಗೊಲ್ಲರಹಳ್ಳಿ ಗ್ರಾಮದ ಬಳಿ ವಿದ್ಯುತ್ ಉತ್ಪಾದನಾ ಕಂಪನಿಯ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದ ರೈತರ ಮೇಲೆ ಪೊಲೀಸರು ಬಲಪ್ರಯೋಗ ನಡೆಸಿದ್ದು ಈ ಘಟನೆ ವಿವಾದಕ್ಕೊಳಗಾಗಿದೆ.
ರೈತ ರೆಹಮತ್ ವುಲ್ಲಾ, ಸಹೋದರ ಬಾಬು, ವೃದ್ಧೆ ಮೆಹಬೂಬಿ ಎಂಬುವವರ ಮೇಲೆ ಪೊಲೀಸರು ದೈಹಿಕ ಹಲ್ಲೆ ನಡೆಸಿದ್ದಾರೆ. ಭರಮಸಾಗರ ಠಾಣೆ ಪಿಎಸ್ ಐ ರವಿ ನಾಯ್ಕ್ ಹಾಗೂ ಸಿಬ್ಬಂದಿಯಿಂದ ಈ ಹಲ್ಲೆ ನಡೆಸಿದ್ದಾಗಿ ಆರೋಪಿಸಲಾಗಿದೆ.
ರೈತ ರೆಹಮತ್ ವುಲ್ಲಾ ಹಲ್ಲೆಯಿಂದ ಗಾಯಗೊಂಡು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ