Latest

ಪಶ್ಚಿಮ ಮಧ್ಯ ರೈಲ್ವೆಯಲ್ಲಿ ಉದ್ಯೋಗವಕಾಶ

ಪ್ರಗತಿವಾಹಿನಿ; ಸುದ್ದಿ: ಪಶ್ಚಿಮ ಮಧ್ಯ ರೈಲ್ವೆ(West Central Railway) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು 20 ಜೂನಿಯರ್ ಟೆಕ್ನಿಕಲ್ ಅಸೋಸಿಯೇಟ್, ಸೀನಿಯರ್ ಟೆಕ್ನಿಕಲ್ ಅಸೋಸಿಯೇಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು,ಅರ್ಹರು ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಹತೆ:ಸೀನಿಯರ್ ಟೆಕ್ನಿಕಲ್ ಅಸೋಸಿಯೇಟ್-ಸಿವಿಲ್ ಎಂಜಿನಿಯರಿಂಗ್,ಜೂನಿಯರ್ ಟೆಕ್ನಿಕಲ್ ಅಸೋಸಿಯೇಟ್-ಡಿಪ್ಲೋಮಾ, ಬಿಎಸ್ಸಿ, ಸಿವಿಲ್ ಎಂಜಿನಿಯರಿಂಗ್.

ವಯೋಮಿತಿ; ಸೀನಿಯರ್ ಟೆಕ್ನಿಕಲ್ ಅಸೋಸಿಯೇಟ್-21ರಿಂದ 35 ವರ್ಷ
ಜೂನಿಯರ್ ಟೆಕ್ನಿಕಲ್ ಅಸೋಸಿಯೇಟ್-18ರಿಂದ 33 ವರ್ಷ‌.

Home add -Advt

ಅರ್ಜಿ ಶುಲ್ಕ: SC/ST/ಮಾಜಿ ಸೈನಿಕ/ಮಹಿಳಾ ಅಭ್ಯರ್ಥಿಗಳಿಗೆ 250 ರೂ.
ಉಳಿದ ಅಭ್ಯರ್ಥಿಗಳಿಗೆ 500 ರೂ.

ಕೆಲಸದ ಸ್ಥಳ ಮಧ್ಯಪ್ರದೇಶವಾಗಿದ್ದು, ಸೀನಿಯರ್ ಟೆಕ್ನಿಕಲ್ ಅಸೋಸಿಯೇಟ್-ಮಾಸಿಕ ₹ 37,000
ಜೂನಿಯರ್ ಟೆಕ್ನಿಕಲ್ ಅಸೋಸಿಯೇಟ್-ಮಾಸಿಕ ₹ 30,000 ವೇತನ ನೀಡಲಾಗುತ್ತದೆ.

ಪ್ರೊಫೆಶನಲ್ ಪ್ರೊಫೆಸಿಯೆನ್ಸಿ ಟೆಸ್ಟ್​,ಶಾರ್ಟ್​​ಲಿಸ್ಟಿಂಗ್
ವೈಯಕ್ತಿಕ ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಅಭ್ಯರ್ಥಿಗಳು ಆನ್​ಲೈನ್(Online)​ ಮೂಲಕ ಅರ್ಜಿ ಸಲ್ಲಿಸಬೇಕು. ಮಾರ್ಚ್​ 17 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ wcr.indianrailways.gov.in ಗೆ ಭೇಟಿ ನೀಡಬಹುದು.

Related Articles

Back to top button