ಪಾಕಿಸ್ತಾನಕ್ಕೆ ಹೋಗಿ -ಸೆಂಥಿಲ್ ವಿರುದ್ಧ ಅನಂತಕುಮಾರ ಹೆಗಡೆ ಟ್ವೀಟಾಕ್ರೋಶ

ಇಲ್ಲೇ ಇದ್ದು ನಮ್ಮ ದೇಶ ಒಡೆಯುವ ಬದಲು ಅಲ್ಲಿಗೆ ಹೋಗಿ

ಪಾಕಿಸ್ತಾನಕ್ಕೆ ಹೋಗಿ -ಸೆಂಥಿಲ್ ವಿರುದ್ಧ ಅನಂತಕುಮಾರ ಹೆಗಡೆ ಟ್ವೀಟಾಕ್ರೋಶ

 

ಪ್ರಗತಿವಾಹಿನಿ ಸುದ್ದಿ, ಶಿರಸಿ –

ರಾಜಿನಾಮೆ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ ಸೆಥಿಲ್ ವಿರುದ್ಧ ಕೇಂದ್ರದ ಮಾಜಿ ಸಚಿವ, ಹಾಲಿ ಸಂಸದ ಅನಂತಕುಮಾರ ಹೆಗಡೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನಕ್ಕೆ ವಲಸೆ ಹೋಗಿ ಎಂದು ಟ್ಟೀಟ್ ಮಾಡಿದ್ದಾರೆ ಅನಂತಕುಮಾರ್ ಹೆಗಡೆ. ಕೇಂದ್ರದ ವಿರುದ್ಧ ಸಿಡಿದೇ ರಾಜೀನಾಮೆ ನೀಡಿದ್ದೇನೆ ಎಂದು ಸೆಂಥಿಲ್ ನೀಡಿರುವ ಹೇಳಿಕೆಗೆ ಹೆಗಡೆ ಕಿಡಿಕಾರಿದ್ದಾರೆ. ಕಾಶ್ಮೀರ, ತಲಾಖ್, ರಾಮಮಂದಿರದ ಬಗ್ಗೆ ಕೇಂದ್ರದ ನಿಲುವು ಸಹಿಸಲಾಗಿಲ್ಲ ಎಂದಿದ್ದರು ಸೆಂಥಿಲ್.

ಇದನ್ನೂ ಓದಿ  – ಮತ್ತೊಬ್ಬ ಐಎಎಸ್ ಅಧಿಕಾರಿ ರಾಜಿನಾಮೆ

ಇಲ್ಲೇ ಇದ್ದು ನಮ್ಮ ದೇಶ ಒಡೆಯುವ ಬದಲು ಅಲ್ಲಿಗೆ ಹೋಗಿ ನಮ್ಮ ದೇಶ ಮತ್ತು ನಮ್ಮ ಸರ್ಕಾರದ ವಿರುದ್ಧ ಹೋರಾಟ ಮಾಡುವುದು ಒಳಿತು ಇದರಲ್ಲಾದರೂ ನಿಯತ್ತು ತೋರಿಸಲಿ ಎಂದು ಟ್ಟೀಟ್.

“ಆತ ಮಾಡಬೇಕಾದ ಮೊದಲ ಕೆಲಸವೆಂದರೆ ತನ್ನ ನಿಲುವನ್ನು ಬೆಂಬಲಿಸಿದವರೊಂದಿಗೆ ಪಾಕಿಸ್ತಾನಕ್ಕೆ ವಲಸೆ ಹೋಗುವುದು. ಇದು ಪ್ರಾಯೋಗಿಕವಾಗಿಯೂ ಸುಲಭ ಮತ್ತು ಅಂತಿಮ ಪರಿಹಾರ ಕೂಡ. ಇಲ್ಲೆ ಇದ್ದು ದೇಶ ಒಡೆಯುವ ಬದಲು ಅಲ್ಲಿಗೆ ಹೋಗಿ ನಮ್ಮ ದೇಶ ಮತ್ತು ನಮ್ಮ ಸರಕಾರದ ವಿರುದ್ದ ನೇರ ಹೋರಾಟ ಮಾಡುವುದು ಒಳಿತು. ಇದರಲ್ಲಾದರೂ ನಿಯತ್ತು ತೋರಿಸಲಿ” ಎಂದು ಅನಂತಕುಮಾರ ಹೆಗಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸೆಂಥಿಲ್ ಎರಡು ದಿನದ ಹಿಂದೆ ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಕೆಲಸ ಮಾಡುವುದು ಕಷ್ಟವಾಗಿದೆ ಎಂದು ಅವರು ಹೇಳಿದ್ದರು.