Latest

*ಪೂರಿ ಗಂಟಲಲ್ಲಿ ಸಿಲುಕಿ 11 ವರ್ಷದ ಬಾಲಕ ಸಾವು*

ಪ್ರಗತಿವಾಹಿನಿ ಸುದ್ದಿ: ಬಾಲಕನೊಬ್ಬ 3 ಪೂರಿ ಒಟ್ಟಿಗೆ ತಿನ್ನಲು ಹೋಗಿ ಸಾವನ್ನಪ್ಪಿರುವ ದಾರುಣ ಘಟನೆ ತೆಲಂಗಾಣದ ಸಿಕಂದರಾಬಾದ್ ಶಾಲೆಯೊಂದರಲ್ಲಿ ನಡೆದಿದೆ.

6ನೇ ತರಗತಿಯ ವಿದ್ಯಾರ್ಥಿ ವಿಕಾಸ್ ಜೈನ್ ಮೃತ ಬಾಲಕ. ತಿವೋಲಿ ಥಿಯೇಟರ್ ಬಳಿ ಇರುವ ಶಾಲೆಯಲ್ಲಿ ವಿಕಾಸ್ ಜೈನ್ ಓದುತ್ತಿದ್ದ. ಮಧ್ಯಾಹ್ನದ ಊಟಕ್ಕೆ ಮನಿಯಿಂದ ತಂದ ಪೂರಿ ತಿನ್ನುವಾಗ ಈ ದುರಂತ ಸಂಭವಿಸಿದೆ.

ಬಾಲಕ ಮೂರು ಪೂರಿಯನ್ನು ಒಟ್ಟಿಗೆ ತಿಂದಿದ್ದಾನೆ. ಗಂಟಲಲ್ಲಿ ಸಿಲುಕಿ ಉಸಿರುಗಟ್ಟಿ ಬಾಲಕ ಕೆಳಗೆ ಕುಸಿದುಬಿದ್ದಿದ್ದಾನೆ. ಪ್ರಜ್ಞೆ ತಪ್ಪಿದ್ದ ಬಾಲಕನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಬಾಲಕನ್ನು ಉಳಿಸಲುಸಾಧ್ಯವಾಗಿಲ್ಲ. ಬಾಲಕ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

Home add -Advt

ಪೊಲೀಸರು ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

Related Articles

Back to top button