National

*ಪೋರ್ಶೆ ಕಾರು ಅಪಘಾತ: ಆರೋಪಿ ಅಪ್ರಾಪ್ತ ಬಾಲಕನ ತಾಯಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಪುಣೆಯಲ್ಲಿ ಪೋರ್ಶೆ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಪ್ರಾಪ್ತ ಬಾಲಕನ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮುಂಬೈನಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿ ಅಪ್ರಾಪ್ತನ ತಾಯಿ ಯನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ. ಶಿವಾನಿ ಅಗರ್ವಾಲ್ ಬಂಧಿತ ಆರೋಪಿ. ಆರೋಪಿ ಮಗ ವೇದಂತ್ ಅಗರ್ವಾಲ್ ನ ರಕ್ತದ ಮಾದರಿಯನ್ನು ತಾಯಿ ಶಿವಾನಿಯೇ ಬದಲಿಸಿದ್ದರು. ಮಗನ ರಕ್ತದ ಮಾದರಿ ಬದಲು ತನ್ನ ರಕ್ತದ ಮಾದರಿ ನೀಡಿದ್ದರು.

ಪ್ರಕರಣ ದಾಖಲಾಗುತ್ತಿದ್ದಂತೆ ಮುಂಬೈನಲ್ಲಿ ತಲೆಮರೆಸಿಕೊಂಡಿದ್ದರು. ಇದಿಗ ಆರೋಪಿ ವೇದಾಂತ್ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.

Home add -Advt

ಮೇ 19ರಂದು ಪುಣೆಯ ಕಲ್ಯಾಣಿ ನಗರದಲ್ಲಿ ಅಪ್ರಾಪ್ತ ಬಾಲಕ ಕುಡಿದ ಮತ್ತಿನಲ್ಲಿ ಐಷಾರಾಮಿ ಪೋರ್ಶೆ ಕಾರು ಓಡಿಸಿ ಬೈಕ್ ಗೆ ದಿಕ್ಕಿ ಹೊಡೆದಿದ್ದ. ಅಪಘಾತದಲ್ಲಿ ಇಬ್ಬರು ಟೆಕ್ಕಿಗಳು ಸಾವನ್ನಪ್ಪಿದ್ದರು.

Related Articles

Back to top button