Latest

ಜಿಮ್ ನಲ್ಲಿ ಬೆದರಿಕೆಯೊಡ್ಡಿ ನಗ್ನಚಿತ್ರ ತೆಗೆಯುತ್ತಿದ್ದ ನಾರಿ ವೇಷಧಾರಿ !

ಪ್ರಗತಿವಾಹಿನಿ ಸುದ್ದಿ, ಪುದುಚೆರಿ: ಮಹಿಳಾ ಫಿಟ್ನೆಸ್ ತರಬೇತುದಾರಳಂತೆ ಪೋಸ್ ನೀಡಿ ಜಿಮ್ ಗೆ ಬಂದ ಮಹಿಳೆಯರಿಗೆ ಬೆದರಿಕೆಯೊಡ್ಡಿ ನಗ್ನ ಚಿತ್ರಗಳನ್ನು ತೆಗೆಯುತ್ತಿದ್ದ ಯುವಕ ಈಗ ಜೈಲುಪಾಲಾಗಿದ್ದಾನೆ.

22 ವರ್ಷದ ದಿವಾಗರ ಹೆಸರಿನ ಯುವಕನನ್ನು ಪುದುಚೇರಿ ಪೊಲೀಸರು ಬಂಧಿಸಿದ್ದು, ಈ ಬಳಿಕ ಈತನ ವಿಕೃತಲೀಲೆಗಳು ಅನಾವರಣಗೊಂಡಿವೆ. ಈತ ಮಹಿಳೆಯಂತೆ ವೇಷ ಧರಿಸಿ ತಾನು ಮಹಿಳೆ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದ.

ಜಿಮ್ ಗೆ ಬರುತ್ತಿದ್ದ ಮಹಿಳಾ ಗ್ರಾಹಕರ ದೇಹ ರಚನೆಯನ್ನು ಸುಧಾರಿಸಲು ಸಲಹೆಗಳನ್ನು ನೀಡಲು ಅವರ ನಗ್ನ ಚಿತ್ರಗಳನ್ನು ಕಳುಹಿಸಲು ಹೇಳುತ್ತಿದ್ದ. ಅದನ್ನು ನಂಬಿ ಸ್ಪಂದಿಸದ ಮಹಿಳೆಯರ ಛಾಯಾಚಿತ್ರಗಳನ್ನು ಬಳಸಿ ಅವರಿಗೆ ಬೆದರಿಕೆ ಹಾಕಿ ತೆಗೆಯುತ್ತಿದ್ದು, ಈಗ ಈತನ ಕೃತ್ಯಕ್ಕೆ ಮುಳುವಾಗಿದೆ.

ಈ ಕುರಿತು ಗ್ರಾಹಕರೊಬ್ಬರು ನೀಡಿದ ದೂರಿನನ್ವಯ ಪೊಲೀಸರು ಯುವಕನ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದು, 10 ನಗ್ನ ವಿಡಿಯೋಗಳು ಪತ್ತೆಯಾಗಿವೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Home add -Advt

https://pragati.taskdun.com/power-supply-disruption-in-many-places-tomorrow/
https://pragati.taskdun.com/13th-all-karnataka-gamaka-kala-sammelna-at-belagavi-on-16th-and-17th/
https://pragati.taskdun.com/outline-discussion-of-20-day-tour-of-national-leaders-cm-basavaraja-bommai/

Related Articles

Back to top button