
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅರಣ್ಯ ಇಲಾಖೆಯ ಬೆಳಗಾವಿ ವೃತ್ತಕ್ಕೆ ಸಂಬಂಧಿಸಿದಂತೆ ಅಧಿಸೂಚಿಸಲಾದ 20 ಅರಣ್ಯ ವೀಕ್ಷಕರ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿರುತ್ತದೆ ಎಂದು ಬೆಳಗಾವಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಆಯ್ಕೆ ಪ್ರಾಧಿಕಾರ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೃಂದ ಮತ್ತು ನೇಮಕಾತಿ ನಿಯಮ ಹಾಗೂ ಅಧಿಸೂಚನೆಯಲ್ಲಿನ ಷರತ್ತುಗಳನ್ವಯ ದೈಹಿಕ ತಾಳ್ವಿಕೆ ಪರೀಕ್ಷೆ [Physical Endurance Test], ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆ [Physical Efficiency Test] ಹಾಗೂ ದೇಹ ದಾರ್ಢ್ಯತೆ ಪರೀಕ್ಷೆ [Physical Standard Test]ಗಳಿಗೆ ಮೆರಿಟ್ ಹಾಗೂ ನೇರ ಮತ್ತು ಸಮತಳ ಬಿಂದುಗಳ ಅನುಸಾರ ಅರ್ಹತೆ ಪಡೆದ ಅಭ್ಯರ್ಥಿಗಳ 1:20 (ಹುದ್ದೆ:ಅಭ್ಯರ್ಥಿ) ತಾತ್ಕಾಲಿಕ ಅರ್ಹತಾ ಪಟ್ಟಿಯನ್ನು ಇಲಾಖೆಯ ಅಂತರ್ಜಾಲ https://aranya.gov.in/ ದಲ್ಲಿ ನೇಮಕಾತಿ (Recruitment) ಶೀರ್ಷಿಕೆಯಡಿ ಪ್ರಕಟಿಸಲಾಗಿರುತ್ತದೆ.
ಇದೇ ರೀತಿ ಪ್ರತೀ ಪ್ರವರ್ಗದಲ್ಲಿ ತಾತ್ಕಾಲಿಕವಾಗಿ ಆಯ್ಕೆಯಾಗಿರುವ ಕೊನೆಯ ಅಭ್ಯರ್ಥಿಯು ಗಳಿಸಿರುವ ಅಂಕಗಳ ಶೇಕಡವಾರು ಮಾಹಿತಿಯ ವಿವರವನ್ನು ಪ್ರಕಟಿಸಲಾಗಿದೆ.
ಈ ಕುರಿತು ಯಾವುದಾದರೂ ಆಕ್ಷೇಪಣೆ ಇದ್ದಲ್ಲಿ ಪೂರಕ ದಾಖಲಾತಿಗಳೊಂದಿಗೆ ಸ್ಪಷ್ಟ ರೀತಿಯಲ್ಲಿ ಆಕ್ಷೇಪಣೆಯನ್ನು ವಿವರಿಸಿ ಇ-ಮೇಲ್ “belagavicircle@gmail.com”/ ಸ್ಪೀಡ್ ಪೋಸ್ಟ್/ರಿಜಿಸ್ಟರ್ ಪೋಸ್ಟ್ ಮೂಲಕ ಈ ಕಛೇರಿಗೆ ದಿನಾಂಕ: 20-02-2024 ಸಂಜೆ 5.30 ಗಂಟೆಯೊಳಗೆ ಸಲ್ಲಿಸಬಹುದಾಗಿರುತ್ತದೆ.
ಈ ಮೇಲೆ ನಿಗದಿಪಡಿಸಿದ ದಿನಾಂಕದ ನಂತರ ಮತ್ತು ಈ ಮೇಲಿನ ವಿಧಾನವನ್ನು ಹೊರತುಪಡಿಸಿ ಇತರೆ ವಿಧಾನ/ಕೊರಿಯರ್ ಮೂಲಕ ಸ್ವೀಕೃತವಾಗುವ ಹಾಗೂ ಅಸ್ಪಷ್ಟ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಹಾಗೂ 1:20 (ಹುದ್ದೆ:ಅಭ್ಯರ್ಥಿ) ತಾತ್ಕಾಲಿಕ ಅರ್ಹತಾ ಪಟ್ಟಿಯಲ್ಲಿನ ಅಭ್ಯರ್ಥಿಗಳ ಕುರಿತು ಯಾವುದೇ ಆಕ್ಷೇಪಣೆಗಳು ಯಾರಿಂದಲೂ ಸ್ವೀಕೃತವಾಗದಿದ್ದಲ್ಲಿ, ಸದರಿ ತಾತ್ಕಾಲಿಕ ಪಟ್ಟಿಯನ್ನು ಸರಿಯಾಗಿದೆ ಎಂದು ಪರಿಗಣಿಸಲಾಗುವುದು. ಇನ್ನುಮುಂದೆ, ಈ ಕುರಿತು ಯಾವುದೇ ಆಕ್ಷೇಪಣೆಗಳನ್ನು ಯಾರಿಂದಲೂ ಸ್ವೀಕರಿಸಲಾಗುವುದಿಲ್ಲ ಎಂದು ಬೆಳಗಾವಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಆಯ್ಕೆ ಪ್ರಾಧಿಕಾರ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.