Karnataka News

*ಅಪ್ರಾಪ್ತೆ ಮೇಲೆ ಕಾರಿನಲ್ಲಿ ಲೈಂಗಿಕ ದೌರ್ಜನ್ಯ: ಡಾನ್ಸ್ ಮಾಸ್ಟರ್ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಕಾರಿನಲ್ಲಿಯೇ ಅಪ್ರಾಪ್ತ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣದಲ್ಲಿ ಡಾನ್ಸ್ ಮಾಸ್ಟರ್ ನನ್ನು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಡಾನ್ಸ್ ಕ್ಲಾಸ್ ಬಗ್ಗೆ ಮಹೈತಿ ಹೇಳುತ್ತೇನೆ ಎಂದು ನಂಬಿಸಿ ಅಪ್ರಾಪ್ತೆಯನ್ನು ತನ್ನ ಕಾರಿಗೆ ಹತ್ತಿಸಿಕೊಂಡ ಕಾಮುಕ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಬೆಂಗಳೂರಿನ ಕಾಡುಗೋಡಿಯಲ್ಲಿ ಈ ಘಟನೆ ನಡೆದಿದೆ.

Home add -Advt

ಭಾರತಿ ಕಣ್ಣನ್ (28) ಬಂಧಿತ ಡಾನ್ಸ್ ಮಾಸ್ಟರ್. ರಸ್ತೆಯಲ್ಲಿ ಹೋಗುತ್ತಿದ್ದ ಅಪ್ರಾಪ್ತೆಯ ಬಳಿ ಕಾರು ನಿಲ್ಲಿಸಿ ಡಾನ್ಸ್ ಕ್ಲಾಸ್ ಬಗ್ಗೆ ತಿಳಿಸುವುದಾಗಿ ಹೇಳಿ ಆಕೆಯನ್ನು ಕಾರಿನಲ್ಲಿ ಹತ್ತಿಸಿಕೊಂಡು, ಕೆಲ ದೂರ ಕಾರು ತೆರಳುತ್ತಿದ್ದಂತೆ ಕಾರು ಲಾಕ್ ಮಾಡಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಕೃತ್ಯದ ಬಳಿಕ ಮತ್ತೆ ಆಕೆಯನ್ನು ಎಲ್ಲಿ ಕಾರು ಹತ್ತಿಸಿಕೊಂಡಿದ್ದ ಅದೇ ಜಾಗಕ್ಕೆ ಕರೆತಂದು ಬಿಟ್ಟು ಹೋಗಿದ್ದಾನೆ.

ಘಟನೆ ಬಗ್ಗೆ ಅಪ್ರಾಪ್ತೆ ತನ್ನ ಪೋಷಕರಿಗೆ ತಿಳಿಸಿದ್ದಾಳೆ. ಕಾಡುಗೋಡಿ ಠಾಣೆಯಲ್ಲಿ ಪೋಷಕರು ದೂರು ನೀಡಿದ್ದರು. ಸದ್ಯ ಡಾನ್ಸ್ ಮಾಸ್ಟರ್ ನನ್ನು ಪೊಲೀಸರು ಬಂಧಿಸಿದ್ದಾರೆ.

Related Articles

Back to top button