Belagavi NewsBelgaum NewsKannada NewsKarnataka NewsNationalPolitics
*ವಿದ್ಯುತ್ ಪ್ರವಹಿಸಿ ಪವರ್ ಮ್ಯಾನ್ ಸಾವು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಜೈತನಮಾಳದಲ್ಲಿ ಐಪಿ ರೀಡಿಂಗ್ ಮಾಡುವ ವೇಳೆ ಟಿಪಿ ಬಾಕ್ಸ್ ನಲ್ಲಿ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಪವರ್ ಮ್ಯಾನ್ ಸಾವನ್ನಪ್ಪಿರುವ ಘಟನೆ ಬೆಳಗಾವಿಯ ಜೈತನಮಾಳದಲ್ಲಿ ಘಟನೆ ನಡೆದಿದೆ.
ರಾಹುಲ್ ಪಾಟೀಲ್(30) ಮೃತ ಪವರ್ ಮ್ಯಾನ್. ಬೆಳಗಾವಿಯ ಯಳ್ಳೂರು ಗ್ರಾಮದ ನಿವಾಸಿಯಾಗಿರೋ ರಾಹುಲ್, ಇಂದು ಬೆಳಗಾವಿಯ ಜೈತನಮಾಳದಲ್ಲಿ ಐಪಿ ರೀಡಿಂಗ್ ತರಲು ರಾಹುಲ್ ಹೋಗಿದ್ದ. ಆ ವೇಳೆ ಟಿಪಿ ಬಾಕ್ಸ್ ನಲ್ಲಿ ವಿದ್ಯುತ್ ಪ್ರವಹಿಸಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಡಿಪಿ ರೀಡಿಂಗ್ ಉಸ್ತುವಾರಿ ನಿರ್ಲಕ್ಷದಿಂದಲೇ ಲೈನ್ ಮೆನ್ ಸಾವನ್ನಪ್ಪಿರುವ ಆರೋಪ ಕೇಳಿ ಬಂದಿದೆ. ಐಪಿ ಸೆಟ್ ಉಸ್ತುವಾರಿ ಮೇಲೆ ಕೇಸ್ ದಾಖಲಿಸಲು ಹೆಸ್ಕಾಂ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.