*ರವಿವಾರ ಬೆಳಗಾವಿಯ ಹಲವೆಡೆ ವಿದ್ಯುತ್ ನಿಲುಗಡೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕ.ವಿ.ಪ್ರ.ನಿ.ನಿ. ವತಿಯಿಂದ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಭಾನುವಾರ ಹಲವೆಡೆ ವಿದ್ಯುತ್ ನಿಲುಗಡೆಯಾಗಿದೆ.
ಕ.ವಿ.ಪ್ರ.ನಿ.ನಿ. ವತಿಯಿಂದ ನಾಲ್ಕನೇಯ ತ್ರೈಮಾಸಿಕ ಹಾಗೂ ಇತರೆ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ೧೧೦ ಕೆ.ವ್ಹಿ. ಸದಾಶಿವ ನಗರ ಉಪಕೇಂದ್ರದಿಂದ ಸರಬರಾಜು ಆಗುವ ಹಿಂಡಲಗಾ, ಕಂಗ್ರಾಳಿ ಕೆ.ಎಚ್, ಅಲತಗಾ, ಅಂಬೇವಾಡಿ ಸುತ್ತಮುತ್ತಲಿನ ಗ್ರಾಮಗಳಿಗೆ ಹಾಗೂ ಸದರಿ ಗ್ರಾಮಗಳ ನೀರಾವರಿ ಪಂಪ್‌ಸೆಟ್‌ಗಳ ಏರಿಯಾಗಳಿಗೆ ದಿನಾಂಕ: ೨೩-೦೩-೨೦೨೫ ರಂದು ಬೆಳಿಗ್ಗೆ ೯ ರಿಂದ ಸಂಜೆ ೪ ಘಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹು.ವಿ.ಸ.ಕಂ.ನಿ ಗ್ರಾಮೀಣ ವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
110 ಕೆ.ವಿ. ಹೊನಗಾ ಉಪಕೇಂದ್ರದಿಂದ ಸರಬರಾಜು ಆಗುವ ಬೆಳಗಾವಿ ತಾಲೂಕಿನ ಬೈಲೂರ, ಜುಮನಾಳ, ಹೆಗ್ಗೇರಿ, ಕೆಂಚಾನಟ್ಟಿ, ಬೆನ್ನಾಳಿ, ದಾಸರವಾಡಿ, ಜೋಗ್ಯಾನಟ್ಟಿ, ಭೂತರಾಮಟ್ಟಿ, ಬಂಬರಗಾ, ಸಿದ್ದಗಂಗಾ ಆಯಿಲ್ ಮಿಲ್, ತುಳಜಾ ಅಲ್ಲಾಯ್ಸ್, ಹತ್ತರಕಿ ಫೀಡ್ಸ್, ವಿನಾಯಕ ಸ್ಟೀಲ್ ಇಂಡಸ್ಟ್ರೀಸ್, ಹರ್ಷದ್ಭವ, ಜಿ. ಹೊಸೂರ, ಗುಗ್ರಾನಟ್ಟಿ, ಗೋಡಿಹಾಳ, ರಾಮದುರ್ಗ, ಉಕ್ಕಡ, ವಂಟಮುರಿ, ಮಾಶಾನಟ್ಟಿ, ಹಾಲಭಾವಿ, ಬೊಮ್ಮನಟ್ಟಿ, ವೀರಭಾವಿ, ಹಳೆ ಹೊಸೂರ, ಹೊಸ ಹೊಸೂರ, ಸುತಗಟ್ಟಿ, ಹೊನಗಾ, ದೇವಗಿರಿ ಗ್ರಾಮಗಳಿಗೆ ಹಾಗೂ ಹೊನಗಾ ಔದ್ಯೋಗಿಕ ಕ್ಷೇತ್ರಗಳಿಗೆ ಹಾಗೂ ಈ ಗ್ರಾಮಗಳ ನೀರಾವರಿ ಪಂಪ್‌ಸೆಟ್‌ಗಳ ಏರಿಯಾಗಳಿಗೆ ದಿನಾಂಕ: 23-03-2025 ರಂದು ಬೆಳಗ್ಗೆ 9 ರಿಂದ ಸಂಜೆ 4 ಘಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹು.ವಿ.ಸ.ಕಂ.ನಿ ಗ್ರಾಮೀಣ ವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.