Belagavi NewsBelgaum NewsKannada NewsKarnataka News

ನ.24, 25ರಂದು ಈ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ

ನ.24 ರಂದು ವಿದ್ಯುತ್ ವ್ಯತ್ಯಯ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕ.ವಿ.ಪ್ರ.ನಿ.ನಿ. ವತಿಯಿಂದ 110 ಕೆ.ವ್ಹಿ. ನೆಹರು ನಗರ ಉಪಕೇಂದ್ರದಲ್ಲಿ ನ.24 ರಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ 33 ಕೆ.ವ್ಹಿ. ಸದಾಶಿವ ನಗರ ಉಪಕೇಂದ್ರದಿಂದ ವಿತರಣೆಯಾಗುವ ಹಿಂಡಲಗಾ, ಕಂಗ್ರಾಳಿ ಕೆ.ಎಚ್, ಅಲತಗಾ, ಅಂಬೇವಾಡಿ. ಮತ್ತು ವಡಗಾಂವ ಉಪಕೇಂದ್ರದಿಂದ ಸರಬರಾಜು ಆಗುವ ಧಾಮನೆ, ಕುರುಬರಹಟ್ಟಿ, ಮಾಸ್ಯಾನಟ್ಟಿ, ದೇವಗ್ಯಾನಟ್ಟಿ, ಔಚಾರಟ್ಟಿ, ಯರಮಾಳ, ಯಳ್ಳೂರ, ಸುಳಗಾ, ರಾಜಹಂಸಗಡ, ದೇಸೂರ, ನಂದಿಹಳ್ಳಿ, ಕೊಂಡಸಕೊಪ್ಪ, ಹಲಗಾ ಹಾಗೂ ಬಸ್ತವಾಡ ಗ್ರಾಮಗಳಿಗೆ ಹಾಗೂ ಸದರಿ ಗ್ರಾಮಗಳ ನೀರಾವರಿ ಪಂಪ್‌ಸೆಟ್‌ಗಳ ಏರಿಯಾಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಗ್ರಾಮೀಣ ವಿಭಾಗದ ಕಾರ್ಯ ಮತ್ತು ಪಾಲನಾ, ಹುವಿಕವಿಕಂನಿ, ಕಾರ್ಯನಿರ್ವಾಹಕ ಇಂಜಿನೀಯರರು(ವಿ), ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ನ. 25 ರಂದು ವಿದ್ಯುತ್ ವ್ಯತ್ಯಯ
ಕ.ವಿ.ಪ್ರ.ನಿ.ನಿ. ವತಿಯಿಂದ ಮೂರನೇಯ ತ್ರೈಮಾಸಿಕ ನಿರ್ವಹಣೆ ಹಾಗೂ ಇತರೆ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ನ.25 ರಂದು ಬೆಳಿಗ್ಗ್ಗೆ 9 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ 110 ಕೆ.ವ್ಹಿ. ಉಚಗಾಂವ ಉಪಕೇಂದ್ರದಿಂದ ವಿತರಣೆಯಾಗುವ ಬಿಜಗರ್ಣಿ, ಬೋಕಮೂರ, ಕವಳೇವಾಡಿ, ಬೆಳವಟ್ಟಿ, ಬಾಕನೂರ, ಬೆಳಗುಂದಿ, ಸೋನೋಲಿ, ಎಳೆಬೈಲ, ರಾಕಸಕೊಪ್ಪ, ಕುದ್ರೇಮನಿ, ಕಲ್ಲೇಹೋಳ, ಬೆಳಗುಂದಿ ಇಂಡಸ್ಟ್ರೀಯಲ್ ಏರಿಯಾ, ಉಚಗಾಂವ, ಬಸುರ್ತೆ, ಬೆಕ್ಕಿನಕೇರಿ, ಸುಳಗಾ, ತುರಮುರಿ, ಕೋಣೇವಾಡಿ, ಬಾಚಿ, ಬೆನಕನಹಳ್ಳಿ, ಸಾವಗಾಂವ, ಮಂಡೋಳಿ, ಹಂಗರಗಾ, ಅಂಗಡಿ ಕಾಲೇಜ್, ಗಣೇಶಪೂರ, ಮಹಾಲಕ್ಷ್ಮೀ ನಗರ, ಆರ್ಮಿ ಕಾಲನಿ, ಕೆ.ಎಚ್.ಬಿ. ಲೇಔಟ್, ಬೆನಕನಹಳ್ಳಿ ಹಾಗೂ ಹಿಂಡಲಗಾ ಉಪಕೇಂದ್ರದಿಂದ ವಿತರಣೆಯಾಗುವ ಹಿಂಡಲಗಾ ಪಂಪ್‌ಹೌಸ್, ಗಣೇಶಪೂರ, ಹಿಂಡಲಗಾ, ಮನ್ನೂರ, ಸರಸ್ವತಿ ನಗರ, ಲಕ್ಷ್ಮೀ ನಗರ, ವಿಜಯ ನಗರ, ಡಿಫೆನ್ಸ್, ಕಾಲನಿ, ಕ್ರಾಂತಿ ನಗರ, ಮಾಸ್ತಿ ನಗರ, ಶಿವಂ ನಗರ, ಗೋಜಗಾ ಹಾಗೂ ಅಂಬೇವಾಡಿ ಗ್ರಾಮಗಳಿಗೆ ಹಾಗೂ ಸದರಿ ಗ್ರಾಮಗಳ ನೀರಾವರಿ ಪಂಪ್‌ಸೆಟ್‌ಗಳ ಏರಿಯಾಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಗ್ರಾಮೀಣ ವಿಭಾಗದ ಕಾರ್ಯ ಮತ್ತು ಪಾಲನಾ, ಹುವಿಕವಿಕಂನಿ, ಕಾರ್ಯನಿರ್ವಾಹಕ ಇಂಜಿನೀಯರರು(ವಿ), ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button