Kannada News

ಬೆಳಗಾವಿ: ಹಲವೆಡೆ ಭಾನುವಾರ ವಿದ್ಯುತ್ ನಿಲುಗಡೆ

  1. ವಡಗಾಂವ ೧೧೦ ಕೆ.ವ್ಹಿ ವಿದ್ಯುತ್ ಕೇಂದ್ರ: ಮಾರ್ಚ್ ೧೩ ರಂದು ವಿದ್ಯುತ್ ವ್ಯತ್ಯಯ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಕ.ವಿ.ಪ್ರ.ನಿ.ನಿ. ವತಿಯಿಂದ ನಾಲ್ಕನೇಯ ತ್ರೈಮಾಸಿಕ ಹಾಗೂ ಇತರೆ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಮಾರ್ಚ್ ೧೩ರಂದು ಬೆಳಿಗ್ಗೆ ೦೯.೦೦ ಘಂಟೆಯಿಂದ ಸಾಯಂಕಾಲ ೦೪.೦೦ ಘಂಟೆಯವರೆಗೆ ೧೧೦ ಕೆ.ವ್ಹಿ. ವಡಗಾಂವ ಉಪಕೇಂದ್ರದಿಂದ ಸರಬರಾಜಾಗುವ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಆಗಲಿದೆ.

ಧಾಮನೆ, ಕುರುಬರಹಟ್ಟಿ, ಮಾಸ್ಗ್ಯಾನಟ್ಟಿ, ದೇವಗ್ಯಾನಟ್ಟಿ, ಔಚಾರಟ್ಟಿ, ಯರಮಾಳ, ಯಳ್ಳೂರ, ಸುಳಗಾ, ರಾಜಹಂಸಗಡ, ದೇಸೂರ, ನಂದಿಹಳ್ಳಿ, ಕೊಂಡಸಕೊಪ್ಪ, ಹಲಗಾ ಹಾಗೂ ಬಸ್ತವಾಡ ಗ್ರಾಮಗಳಿಗೆ ಹಾಗೂ ನೀರಾವರಿ ಪಂಪ್‌ಸೆಟ್‌ಗಳ ಏರಿಯಾಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಬೆಳಗಾವಿ ಗ್ರಾಮೀಣ ವಿಭಾಗದ ಹು.ವಿ.ಸ.ಕಂ.ನಿ ಕಾರ್ಯನಿರ್ವಾಹಕ ಇಂಜಿನೀಯರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2. ಹಿರೇಬಾಗೇವಾಡಿ ೧೧೦ ಕೆ.ವ್ಹಿ. ವಿದ್ಯುತ್ ಕೇಂದ್ರ: ಮಾರ್ಚ್ ೧೩ ರಂದು ವಿದ್ಯುತ್ ವ್ಯತ್ಯಯ

ಕ.ವಿ.ಪ್ರ.ನಿ.ನಿ. ವತಿಯಿಂದ ನಾಲ್ಕನೇಯ ತ್ರೈಮಾಸಿಕ ಹಾಗೂ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಮಾರ್ಚ್ ೧೩ ರಂದು ಬೆಳಿಗ್ಗೆ ೧೦ ಘಂಟೆಯಿಂದ ಸಾಯಂಕಾಲ ೦೪ ಘಂಟೆಯವರೆಗೆ ೧೧೦ ಕೆ.ವ್ಹಿ. ಹಿರೇಬಾಗೇವಾಡಿ ಉಪಕೇಂದ್ರದಿಂದ ಸರಬರಾಜು ಆಗುವ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಆಗಲಿದೆ.

ಬೆಳಗಾವಿ ತಾಲೂಕಿನ ಮುತ್ನಾಳ, ವಿರಕನಕೊಪ್ಪ, ಅರಳಿಕಟ್ಟಿ, ಬಸಾಪೂರ, ಹಿರೇಬಾಗೇವಾಡಿ, ಭೆಂಡಿಗೇರಿ, ಗಜಪತಿ, ಅಂಕಲಗಿ, ಹುಲಿಕವಿ, ಕೆ. ಕೆ. ಕೊಪ್ಪ, ಕಲಾರಕೊಪ್ಪ, ಸಿದ್ಧನಹಳ್ಳಿ, ಬಡೇಕೊಳ್ಳಮಠ, ಹಲಗಿಮರ್ಡಿ, ನಾಗೇನಟ್ಟಿ, ನಾಗೇರಹಾಳ, ಬಡಸ, ನಂದಿಹಳ್ಳಿ ಹಾಗೂ ಕುಕಡೊಳ್ಳಿ ಗ್ರಾಮಗಳಿಗೆ ಹಾಗೂ ಖಾನಾಪೂರ ತಾಲೂಕಿನ ಹಿರೇಹಟ್ಟಿಹೊಳಿ, ಚಿಕ್ಕಹಟ್ಟಿಹೊಳಿ, ಗಾಡಿಕೊಪ್ಪ, ಜಿಕನೂರ ಹಾಗೂ ಪಾರಿಶ್ವಾಡ ಗ್ರಾಮಗಳಿಗೆ ಹಾಗೂ ಸದರಿ ಗ್ರಾಮಗಳ ನೀರಾವರಿ ಪಂಪ್‌ಸೆಟ್‌ಗಳ ಏರಿಯಾಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬೆಳಗಾವಿ ಗ್ರಾಮೀಣ ವಿಭಾಗದ ಹು.ವಿ.ಸ.ಕಂ.ನಿ ಕಾರ್ಯನಿರ್ವಾಹಕ ಇಂಜಿನೀಯರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
3. ತುರ್ತು ನಿರ್ವಹಣಾ ಕಾರ್ಯ: ಮಾರ್ಚ್ ೧೩ ರಂದು ವಿದ್ಯುತ್ ವ್ಯತ್ಯಯ

ಟಿ.ಎಲ್.ಮತ್ತು ಎಸ್.ಎಸ್ ವಿಭಾಗ-ಕ.ವಿ.ಪ್ರ.ನಿ.ನಿ. ವತಿಯಿಂದ ನಾಲ್ಕನೇಯ ತ್ರೈಮಾಸಿಕ ಹಾಗೂ ಇತರೆ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಮಾರ್ಚ್ ೧೩ ರಂದು ಬೆಳಿಗ್ಗೆ ೦೯.೦೦ ಘಂಟೆಯಿಂದ ಸಾಯಂಕಾಲ ೦೫ ಘಂಟೆಯವರೆಗೆ ೧೧೦ ಕೆ.ವ್ಹಿ. ವಡಗಾಂವ ಉಪಕೇಂದ್ರದಿಂದ ಸರಬರಾಜಾಗುವ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಆಗಲಿದೆ.

ಬಜಾರ್ ಗಲ್ಲಿ, ವಡಗಾಂವ, ಹಳೆ ಬೆಳಗಾವಿ, ಹೊಸೂರ, ಸುಭಾಷ ಮಾರ್ಕೆಟ್, ವಿದ್ಯಾನಗರ, ಭಾಗ್ಯನಗರ, ಯಳ್ಳುರ ರೋಡ್‌ಗಳಲ್ಲಿ ವಿದ್ಯುತ್ ಸಂಪರ್ಕ ವ್ಯತ್ಯಯ ಆಗಲಿದೆ ಎಂದು ಬೆಳಗಾವಿ ನಗರ ವಿಭಾಗದ ಕಾರ್ಯ ನಿರ್ವಾಹಕ ಅಭಿಯಂತರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯೋಗಿ ಆದಿತ್ಯನಾಥ್ ರಾಜೀನಾಮೆ

ಮಾಲೀಕ ಹೊರ ಹೋದಾಗ ಬೋರ್ ಆಗಿದ್ದಕ್ಕೆ ನಳ ತಿರುಗಿಸಿ ಸ್ನಾನ ಮಾಡಿದ ನಾಯಿ, 4 ಲಕ್ಷ ರೂ. ಹಾನಿ !

https://pragati.taskdun.com/belgaum-news/no-power-on-22nd-and-23rd/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button