Latest

ಬಾಡಿಗೆಗೆ ಇದ್ದ ಶಿಕ್ಷಕಿಯನ್ನೆ ಪ್ರೀತಿಸಿ ಮದುವೆಯಾದ ಓನರ್; ಕೈ ಕೊಟ್ಟು 2ನೇ ವಿವಾಹವಾಗಿ ಎಸ್ಕೇಪ್

ಪ್ರಗತಿವಾಹಿನಿ ಸುದ್ದಿ; ರಾಯಚೂರು: ಮನೆಯ ಬಾಡಿಗೆಗೆ ಇದ್ದ ಶಿಕ್ಷಕಿಯನ್ನು ವಿವಾಹವಾಗಿದ್ದ ವೋನರ್ ಇದೀಗ ಆಕೆಗೆ ಕೈಕೊಟ್ಟು ಬೇರೊಂದು ವಿವಾಹವಾಗಿದ್ದು, ಪತಿ ಅನ್ಯಾಯಕ್ಕೆ ಬೇಸತ್ತ ಶಿಕ್ಷಕಿ ಮನೆ ಮುಂದೆ ಪ್ರತಿಭಟನೆ ನಡೆಸಿದ ಘಟನೆ ರಾಯಚೂರಿನಲ್ಲಿ ನಡೆದಿದೆ.

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಸರ್ಕಾರಿ ಪ್ರೌಢ ಶಾಲೆಯೊಂದರ ಶಿಕ್ಷಕಿ ಶಾಂತಾಬಾಯಿ ಪತಿಯಿಂದಲೆ ವಂಚನೆಗೊಳಗಾದವರು. ನಾಲ್ಕೈದು ವರ್ಷಗಳ ಹಿಂದೆ ತಾನು ಬಾಡಿಗೆಗೆ ಇದ್ದ ಮನೆಯ ಓನರ್ ಪ್ರತಾಪ್ ಎಂಬಾತನನ್ನು ಪ್ರೀತಿಸಿವಿವಾಹವಾಗಿದ್ದರು. ಇಬ್ಬರೂ 2017 ಅಕ್ಟೋಬರ್ 6ರಂದು ಬೆಂಗಳೂರಿನ ಪೀಣ್ಯದಲ್ಲಿ ರಜಿಸ್ಟರ್ ಮ್ಯಾರೇಜ್ ಆದ್ದರು. ನಾಲ್ಕು ವರ್ಷಗಳ ಕಾಲ ಪತ್ನಿಯೊಂದಿಗೆ ಚನ್ನಾಗಿಯೇ ಇದ್ದ ಪ್ರತಾಪ್ ಇದೀಗ ಬೇರೊಂದು ವಿವಾಹವಾಗಿದ್ದಾನೆ. ಹೈಸ್ಕೂಲು ಶಿಕ್ಷಕಿಯಾಗಿರುವ ಶಾಂತಾಬಾಯಿ ನ್ಯಾಯಕ್ಕಾಗಿ ಕಣ್ಣೀರಿಟ್ಟಿದ್ದಾರೆ.

ಪ್ರತಾಪ್ ಮನೆಯವರ ಒತ್ತಾಯಕ್ಕೆ 2018ರ ಫೆ.25ರಂದು ಎರಡನೇ ಮದುವೆಯಾಗಿದ್ದಾನೆ. ಈ ವಿಚಾರ ಮೊದಲ ಪತ್ನಿ ಶಾಮ್ತಾಬಾಯಿಗೆ ಗೊತ್ತಾಗಿದ್ದು 2020ರಲ್ಲಿ. ಆಗ ದೇವದುರ್ಗ ಠಾಣೆಯಲ್ಲಿ ಪತಿಯ ವಿರುದ್ಧ ದೂರು ದಾಖಲಿಸಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಪ್ರತಾಪ್ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲು ಆರಂಭಿಸಿದ್ದಾಗಿ ದೂರಿದ್ದಾರೆ. ಇದೀಗ ಮತ್ತೆ ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಶಾಂತಾಬಾಯಿ ಪತಿಯಿಂದ ಆದ ಅನ್ಯಾಯಕ್ಕೆ ನ್ಯಾಯಕೊಡಿಸುವಂತೆ ಕಣ್ಣೀರಿಟ್ಟಿದ್ದಾರೆ.
ಹಲವು ಜಿಲ್ಲೆಗಳಲ್ಲಿ ಇನ್ನೂ ಐದು ದಿನ ಭಾರಿ ಮಳೆ; ಬೆಳಗಾವಿಗೂ ತಟ್ಟಲಿದೆ ಅಸನಿ ಎಫೆಕ್ಟ್

Home add -Advt

Related Articles

Back to top button