Karnataka NewsLatest

ಟೋಲ್ ನಾಕಾದಲ್ಲಿ ವಿದ್ಯುತ್ ಕಳ್ಳತನ

ಇನ್ನೂ ಕೆಲವು ಪ್ರಮುಖ ಸುದ್ದಿಗಳು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -: ಬೆಳಗಾವಿಯ ಹೆಸ್ಕಾಂ ಜಾಗೃತದಳ ಪೋಲಿಸ್ ಠಾಣೆ ವತಿಯಿಂದ ನವೆಂಬರ್ ೨ ರಂದು ಬೈಲಹೊಂಗಲ ತಾಲೂಕಿನ ಸಾನಿಕೊಪ್ಪ ಗ್ರಾಮದ ಅಶೋಕ ಟೊಲ್ ನಾಕಾ ಇವರ ಹೊಸ ಕಟ್ಟಡದ ಕಾಮಗಾರಿ ಮೇಲೆ ಅಧಿಕಾರಿಗಳು ದಾಳಿ ಮಾಡಿದಾಗ ವಿದ್ಯುತ್ ದುರುಪಯೋಗ ಮಾಡಿರುವುದು ಕಂಡು ಬಂದಿದೆ.

ಈ ಆರೋಪದ ಮೇಲೆ ಆರೋಪಿಗೆ ಹೆಸ್ಕಾಂ ಜಾಗೃತದಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ೧,೫೧,೨೦೦ ರೂ. ಗಳ ದಂಡ ವಿಧಿಸಿದ್ದಾರೆ.
ಈ ಕಾರ್ಯಾಚಾರಣೆಯಲ್ಲಿ ಎ.ಇ.ಇ ಅಧಿಕಾರಿ ಎ.ಆಯ್.ನೀರಲಕಟ್ಟಿ, ಹೆಸ್ಕಾಂ ಇನ್ಸಪೆಕ್ಟರ್ ಟಿ.ಬಿ.ನೀಲಗಾರ ಹಾಗೂ ಜಾಗೃತದಳದ ಪೋಲಿಸ್ ಠಾಣೆಯ ಸಿಬ್ಬಂದಿಗಳು ಹಾಜರಿದ್ದರು.
ಕಾರ್ಯಾಚರಣೆಯಲ್ಲಿ ಹಾಜರಿದ್ದಂತಹ ಇಲಾಖೆಯ ಸಿಬ್ಬಂದಿಗಳಿಗೆ ಹೆಸ್ಕಾಂ ವರಿಷ್ಠಾಧಿಕಾರಿ ರವಿಂದ್ರ ಗಡಾದಿ ಹಾಗೂ ಉಪ ಪೋಲಿಸ್ ಆಯುಕ್ತರಾದ ವಿಜಯಕುಮಾರ ತಳವಾರ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವಿದ್ಯುತ್ ನಿಲುಗಡೆ

ಲೋಕೋಪಯೋಗಿ ಇಲಾಖೆ ವತಿಯಿಂದ ರಸ್ತೆ ಅಗಲೀಕರಣ ಕೆಲಸವನ್ನು ಕೈಗೊಳ್ಳುತ್ತಿರುವುದರಿಂದ ಹಾಗೂ ವಿದ್ಯುತ್ ಮಾರ್ಗಗಳ ಸ್ಥಳಾಂತರ ಕಾರ್ಯವನ್ನು ಕೈಗೊಳ್ಳುತ್ತಿರುವುದರಿಂದ ನವೆಂಬರ್ ೧೧ ರಂದು ಬೆಳಿಗ್ಗೆ ೧೦ ಗಂಟೆಯಿಂದ ಸಾಯಂಕಾಲ ೫. ಗಂಟೆಯವರೆಗೆ ವಿದ್ಯುತ್ ನಿಲುಗಡೆ ಆಗಲಿದೆ.
೩೩ ಕೆ.ವ್ಹಿ. ಸದಾಶಿವ ನಗರ ಉಪಕೇಂದ್ರದಿಂದ ವಿತರಣೆಯಾಗುವ ವಾಟರ್ ಸಪ್ಲಾಯ್, ಹಿಂಡಲಗಾ, ಕಂಗ್ರಾಳಿ ಕೆ.ಎಚ್, ಅಲತಗಾ, ಅಂಬೇವಾಡಿ, ಮನ್ನೂರ, ಸೋಮನಾಥ ನಗರ, ಸರಸ್ವತಿ ನಗರ, ವಿಜಯ ನಗರ, ಮಾಸ್ತೆ ನಗರ ಹಾಗೂ ಗೋಜಗಾ ಗ್ರಾಮಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ, ಎಂದು ಹು.ವಿ.ಸ.ಕಂ ಗ್ರಾಮೀಣ ವಿಭಾಗದ ಕಾಂiiನಿರ್ವಾಹಕ ಇಂಜಿನೀಯರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾನೂನು ವಿ.ವಿ.; ಸೆಮಿಸ್ಟರ್ ಪರೀಕ್ಷೆಗಳು

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಅಧೀನದಲ್ಲಿ ಬರುವ ಎಲ್ಲ ಕಾನೂನು ಮಹಾವಿದ್ಯಾಲಯಗಳಿಗೆ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲ್ಯಯ ಹುಬ್ಬಳ್ಳಿಯು ಈಗಾಗಲೇ ಇಂಟರ್ ಮಿಡಿಯೇಟ್ ಸೆಮಿಸ್ಟರ್ ಪರೀಕ್ಷೆಗಳನ್ನು ಹೊರತು ಪಡಿಸಿ ಅಂತಿಮ ವರ್ಷದ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಲು ಅಖಿಲ ಭಾರತ ವಕೀಲ ಮಂಡಳಿಯು ನಿರ್ಧರಿಸಿದೆ.
ಅದರ ಪ್ರಕಾರ ಎಲ್ಲ ಇಂಟರ್ ಮಿಡಿಯೇಟ್ ಸೆಮಿಸ್ಟರ್ ವಿದ್ಯಾರ್ಥಿಗಳ ಪರೀಕ್ಷೆಗಳನ್ನು ನಡೆಸದೆ ಮುಂದಿನ ವರ್ಷಕ್ಕೆ ಪ್ರವೇಶ ಕಲ್ಪಿಸಲಾಗಿದೆ. ಮಹಾವಿದ್ಯಾಲಯಗಳು ಪುನರಾರಂಭಗೊಂಡು ಕೋವಿಡ್-೧೯ ರ ಪರಿಸ್ಥಿತಿ ಸುಧಾರಿಸಿದ ನಂತರ ಈ ಪರೀಕ್ಷೆಗಳನ್ನು ನಡೆಸುವುದು ಅಖಿಲ ಭಾರತ ವಕೀಲ ಮಂಡಳಿಯ ನಿಯಮಾವಳಿಗಳಂತೆ ಕಡ್ಡಾಯವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಯಾವುದೇ ಗೊಂದಲಕ್ಕೊಳಗಾಗದೆ ಪರೀಕ್ಷೆಗಳ ತಯಾರಿ ಮಾಡಿಕೊಳ್ಳುವತ್ತ ತಮ್ಮ ಗಮನ ಹರಿಸಲು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಡಾ. ಜಿ.ಬಿ. ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Home add -Advt

 

ಭತ್ತ ಖರೀದಿ ಕೇಂದ್ರ ಆರಂಭ

 

ಬೆಳಗಾವಿ ಜಿಲ್ಲೆಯ, ಬೆಳಗಾವಿ ತಾಲ್ಲೂಕು ಹಾಗೂ ಖಾನಾಪುರ ತಾಲ್ಲೂಕಿನ, ನಂದಗಡ ಪಟ್ಟಣದಲ್ಲಿ ೨೦೨೦-೨೧ನೇ ಸಾಲಿನ ಭತ್ತ ಖರೀದಿ ಕೇಂದ್ರಗಳನ್ನು ಸರ್ಕಾರದಿಂದ ಖರೀದಿಸಲು ಪ್ರಾರಂಭಿಸಲಾಗಿದೆ.
ಪ್ರತಿ ರೈತರಿಂದ ಗರಿಷ್ಟ ೪೦ ಕ್ವಿಂಟಲ್ ಭತ್ತವನ್ನು ಪ್ರತಿ ಕ್ವಿಂಟಲ್‌ಗೆ ರೂ. ೧೮೬೮ ದರದಂತೆ ಖರೀದಿಸಲಾಗುವುದು. ರೈತರು ನವೆಂಬರ್ ೩೦ ರಿಂದ ಡಿಸೆಂಬರ್ ೩೦ ರವರೆಗೆ ಸೂಕ್ತ ದಾಖಲಾತಿಗಳೊಂದಿಗೆ ನೋಂದಣ ಮಾಡಿಕೊಳ್ಳಲು ಜಿಲ್ಲಾಧಿಕಾರಿ ‘ಎಂ.ಜಿ.ಹೀರೆಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ನೋಡಲ್ ಏಜೆನ್ಸಿ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ, ಬೆಳಗಾವಿ ಇವರ ದೂರವಾಣಿ ಸಂಖ್ಯೆ ೯೪೪೯೮೬೪೪೪೫ ನ್ನು ಸಂಪರ್ಕಿಸಬಹುದು.

 

Related Articles

Back to top button