Kannada NewsKarnataka NewsLatest

ಜೀವದ ಹಂಗು ತೊರೆದು ಜನತೆಗಾಗಿ ಶ್ರಮಿಸುವ ಪವರ್ ಮ್ಯಾನ್ ಗಳ ಕಾರ್ಯ ಪ್ರಶಂಸನೀಯ: ಚನ್ನರಾಜ ಹಟ್ಟಿಹೊಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಪಾಯಕಾರಿ ಸನ್ನಿವೇಶಗಳಲ್ಲೂ ಜೀವದ ಹಂಗು ತೊರೆದು ಪರಿಶ್ರಮದಿಂದ ಕಾರ್ಯಾಚರಿಸಿ ಜನತೆಗೆ ಬೆಳಕು ನೀಡುವ ಪವರ್ ಮ್ಯಾನ್ ಗಳ ಸೇವೆ ಪ್ರಶಂಸನೀಯ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು. 

ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದ ಪೀರನವಾಡಿ ಸೆಕ್ಷನ್ 1, ಪೀರನವಾಡಿ ಸೆಕ್ಷನ್ 2, ಉಚಗಾಂವ ಹಾಗೂ ಹಿಂಡಲಗಾ ಈ ಪ್ರದೇಶಗಳಲ್ಲಿ ಹಗಲಿರುಳು ಕೆಲಸ ಮಾಡುವ ಪವರ್ ಮ್ಯಾನ್ ಗಳ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ,  ಲಕ್ಷ್ಮೀ ತಾಯಿ ಫೌಂಡೇಶನ್‌ ವತಿಯಿಂದ ಉತ್ತಮ ಗುಣಮಟ್ಟದ ರೇನ್ ಕೋಟ್ ಗಳನ್ನು  ಮಂಗಳವಾರ ವಿತರಿಸಿ ಮಾತನಾಡಿದರು.

ಈ ಮೊದಲು ಲೈನ್ ಮ್ಯಾನ್ ಎಂದು ಕರೆಯಲ್ಪಡುತ್ತಿದ್ದವರಿಗೆ ‘ಪವರ್ ಮ್ಯಾನ್’  ಎಂದು ಬಿರುದು ನೀಡಿದ ಶ್ರೇಯಸ್ಸು ಮಾಜಿ ಇಂಧನ ಸಚಿವ ಡಿ.ಕೆ. ಶಿವಕುಮಾರ ಅವರಿಗೆ ಸಲ್ಲುತ್ತದೆ. ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಡಿ.ಕೆ. ಶಿವಕುಮಾರ ಅವರು ಇಂಧನ ಸಚಿವರಾಗಿದ್ದಾಗ ಇಂಧನ ಖಾತೆಯಲ್ಲಿ ಗುಣಾತ್ಮಕ ಬದಲಾವಣೆಗಳನ್ನು ಮಾಡಿದ್ದಾರೆ. ಇದೀಗ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಪವರ್ ಮ್ಯಾನ್ ಗಳ ಸೇವೆಯ ಮಹತ್ವ ಪರಿಗಣಿಸಿ, ಮಳೆಗಾಲದಲ್ಲಿ ಸುರಕ್ಷಿತತೆ ಕ್ರಮವಾಗಿ ಲಕ್ಷ್ಮೀತಾಯಿ ಫೌಂಡೇಷನ್ ವತಿಯಿಂದ ರೇನ್ ಕೋಟ್ ಗಳನ್ನು ವಿತರಿಸಿದ್ದಾರೆ. ಇನ್ನೂ ಹೆಚ್ಚಿನ ಸೇವೆಗೆ ತಾವು ಸದಾ ಬದ್ಧ ಎಂದು ಅವರು ಹೇಳಿದರು.

ಯುವರಾಜ ಕದಂ, ರಘುನಾಥ್ ಖಂಡೆಕರ್, ಬಸನಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ಅಶೋಕ ಕಾಂಬಳೆ, ವಿಠ್ಠಲ ದೇಸಾಯಿ, ಗಜಾನನ ಕಾಕತ್ಕರ್, ಜಯವಂತ ಬಾಳೇಕುಂದ್ರಿ, ಸುಧೀರ ಪಾಟೀಲ, ಆಯಾ ಭಾಗದ ಸೆಕ್ಷನ್ ಅಧಿಕಾರಿಗಳು ಹಾಗೂ ಹೆಸ್ಕಾಂ ವಿಭಾಗದ ಮೇಲಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಎಲ್ಲಾ ನಿಗಮ, ಮಂಡಳಿ ನೇಮಕ ರದ್ದು- CM ಆದೇಶ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button