
ಮಾಂಜರಿ, ಅಂಕಲಿ ಕಾಳಜಿ ಕೇಂದ್ರಗಳಿಗೆ ಡಾ.ಪ್ರಭಾಕರ ಕೋರೆ ಭೇಟಿ
ಪ್ರಗತಿವಾಹಿನಿ ಸುದ್ದಿ, -ಬೆಳಗಾವಿ –
ಭೀಕರ ಮಹಾಪ್ರವಾಹದಿಂದ ಸಂಕಷ್ಟಕ್ಕೀಡಾಗಿರುವ ನಿರಾಶ್ರಿತರ ಪ್ರದೇಶಗಳಿಗೆ ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಇಂದು ಸಹ ಭೇಟಿ ನೀಡಿದ್ದರು.
ಚಿಕ್ಕೋಡಿ ತಾಲೂಕಿನ ಸ್ವಗ್ರಾಮ ಅಂಕಲಿ ಹಾಗೂ ಮಾಂಜರಿ ಕಾಳಜಿ ಕೇಂದ್ರಗಳಿಗೆ ನಿರಂತರವಾಗಿ ಭೇಟಿ ನೀಡುವ ಮೂಲಕ ಪರಿಹಾರ ವಿತರಣೆಯ ಕುರಿತು ಪರಿಶೀಲಿಸಿದರು. ಕೈಗೊಳ್ಳಬೇಕಾದ ಮುಖ್ಯ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಸುದೀರ್ಘವಾಗಿ ಚರ್ಚಿಸಿದರು. ಅಂತೆಯೆ ನೆರೆ ಸಂತ್ರಸ್ತರಿಗೆ ಧೈರ್ಯ ತುಂಬುವುದರೊಂದಿಗೆ ಅವರ ಸಮಸ್ಯೆಗಳಿಗೆ ಡಾ.ಪ್ರಭಾಕರ ಕೋರೆ ಸ್ಪಂದಿಸಿದರು.
ರಾಯಬಾಗ ತಾಲೂಕಿನ ನೆರೆಪೀಡಿತ ಪ್ರದೇಶಗಳಿಗೆ ಅಮಿತ ಕೋರೆ
ರಾಯಬಾಗ ತಾಲೂಕಿನ ಯಲ್ಪಾರಟ್ಟಿ ಗ್ರಾಮಕ್ಕೆ ಕೆಎಲ್‌ಇ ಸಂಸ್ಥೆಯ ನಿರ್ದೇಶಕರು ಹಾಗೂ ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಅಮಿತ ಕೋರೆ ಭೇಟಿ ನೀಡಿ, ಪರಿಹಾರ ಸಾಮಗ್ರಿಗಳ ವಿತರಣೆಯನ್ನು ಗಮನಿಸಿದರು. ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿ ಚೆಕ್‌ಗಳನ್ನು ನಿರಾಶ್ರಿತರಿಗೆ ವಿತರಿಸಿದರು. ಈ ಸಂದರ್ಭದಲ್ಲಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ಶಾಸಕ ಪಿ.ರಾಜೀವ, ದೂಧಗಂಗಾ ಕೃಷ್ಣಾ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ಭರತ ಬನವಣೆ ಅವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ