ಹೊನ್ನಿದಿಬ್ಬ ದೇವಸ್ಥಾನದಲ್ಲಿ ವಾಮಾಚಾರ ಮಾಡಿ ನಿಧಿಗಾಗಿ ಲಿಂಗ ಕಿತ್ತ ದುಷ್ಕರ್ಮಿಗಳು

ಪ್ರಗತಿವಾಹಿನಿ ಸುದ್ದಿ, ಕಿತ್ತೂರು – ಇಲ್ಲಿಗೆ ಸಮೀಪದ ಹೊನ್ನಿದಿಬ್ಬದ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಶನಿವಾರ ರಾತ್ರಿ ದುಷ್ಕರ್ಮಿಗಳು ಶಿವಲಿಂಗವನ್ನು ಕಿತ್ತು ಹಾಕಿದ್ದಾರೆ. ದೇವಸ್ಥಾನದ ಸುತ್ತ ವಾಮಾಚಾರ ಮಾಡಲಾಗಿದ್ದು, ಒಳಗೆ ಅಗೆದು ನಿಧಿಗಾಗಿ ಶೋಧ ನಡೆಸಿರುವ ಶಂಕೆ ವ್ಯಕ್ತವಾಗಿದೆ.
ರಾಮಲಿಂಗೇಶ್ವರ ದೇವಸ್ಥಾನ ಊರಿನ ಹೊರಗೆ ಹೊಲದಲ್ಲಿದೆ. ಇಂದು ಬೆಳಗ್ಗೆ ಪೂಜೆಗೆಂದು ಅರ್ಚಕರು ಬಂದಾಗ ಅಲ್ಲಿ ಅಗೆದಿರುವುದನ್ನು ನೋಡಿದ್ದಾರೆ. ದೇವಸ್ಥಾನದ ಸುತ್ತ ಲಿಂಬೆ ಹಣ್ಣು ಕುಂಕುಮಗಳನ್ನು ಹಾಕಿದ್ದಾರೆ. ಒಳಗೆ ಲಿಂಗ ಅಗೆದು ಕಿತ್ತು ಹಾಕಿದ್ದಾರೆ.
ಇದು ನಿಧಿಗಾಗಿ ಮಾಡಿರುವ ಕೃತ್ಯವಾಗಿದೆ ಎಂದು ಊರಿನ ಹಿರಿಯ ಬಸವರಾಜ ಪಾಟೀಲ ಪ್ರಗತಿವಾಹಿನಿಗೆ ತಿಳಿಸಿದ್ದಾರೆ. ದೇವಸ್ಥಾನ ಊರ ಹೊರಗಿದ್ದು, ಬೆಳಗ್ಗೆ ಪೂಜೆಗೆ ಬಂದಾಗ ನೋಡಿದ ಪೂಜಾರಿ ಊರಿನ ಜನರಿಗೆ ತಿಳಿಸಿದ್ದಾರೆ. ನಾವೆಲ್ಲ ಇಲ್ಲಿ ಸೇರಿದ್ದೇವೆ. ಪೊಲೀಸರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದೇವೆ. ಅವರು ದೇವಸ್ಥಾನಕ್ಕೆ ಕ್ಯಾಮರಾ ಹಾಕಿ, ಕಾವಲಿಡಿ ಎನ್ನುತ್ತಿದ್ದಾರೆ. ಸ್ಥಳಕ್ಕೆ ಬಂದಿಲ್ಲ. ನಾವು ದೂರು ಕೊಡುವ ಕುರಿತು ಚರ್ಚಿಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಇದು ಬಹಳ ಹಳೆಯ ದೇವಸ್ಥಾನವಾಗಿದ್ದು, ದೇವಸ್ಥಾನಕ್ಕೆ ಬಾಗಿಲು ಇಲ್ಲ. ದಿನವೂ ಪೂಜೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಈ ಹಿಂದೆ 4 -5 ವರ್ಷದ ಹಿಂದೆ ಕೂಡ ಇಂತಹ ಕೃತ್ಯ ನಡೆದಿತ್ತು ಎನ್ನುತ್ತಾರೆ ಶಿವು ಪಾಟೀಲ.
ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಹಾವು ಕಡಿತ; ಆಸ್ಪತ್ರೆಗೆ ದಾಖಲು