Karnataka NewsLatest

*ಎಸಿ ಆನ್ ಮಾಡಿ ವಾಹನದಲ್ಲಿ ಮಲಗುವ ಮುನ್ನ ಈ ಸ್ಟೋರಿ ನೋಡಿ: ಕಾರಲ್ಲೇ ಶವವಾದ ವ್ಯಕ್ತಿ*

ಪ್ರಗತಿವಾಹಿನಿ ಸುದ್ದಿ: ವ್ಯಕ್ತಿಯೋರ್ವ ತನ್ನ ಕಾರಿನಲ್ಲಿ ಎಸಿ ಆನ್ ಮಾಡಿ ಮಲಗಿದ್ದವನು ಕಾರಿನಲ್ಲಿಯೇ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಮಣಿಪಾಲ ಆಸ್ಪತ್ರೆ ಬಳಿ ನಡೆದಿದೆ.

Home add -Advt

ಚಿಕ್ಕಮಗಳೂರು ಮೂಲದ ಆನಂದ್ (37) ರೋಗಿಯೊಬ್ಬರನ್ನು ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದರು. ರೋಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ. ರಾತ್ರಿ ಉಳಿದುಕೊಳ್ಳಲು ರೂಮ್ ಸಿಗದ ಕಾರಣ ಆನಂದ್ ತಮ್ಮ ಕಾರಿನಲ್ಲಿಯೇ ಮಲಗಿದ್ದಾರೆ. ಕಾರಿನ ಗ್ಲಾಸ್ ಗಳನ್ನು ಮುಚ್ಚಿ, ಎಸಿ ಆನ್ ಮಾಡಿಕೊಂಡು ಕಾರಿನಲ್ಲಿಯೇ ಮಲಗಿದ್ದ ವ್ಯಕ್ತಿ ಬೆಳಗಾಗುವಷ್ಟರಲ್ಲಿ ಶವವಾಗಿದ್ದಾರೆ.

ಉಸಿರುಗಟ್ಟಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಮಣಿಪಾಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


Related Articles

Back to top button