
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ತೇಲಸಂಗ ಟ್ರೆವೆಲ್ಸ್ ನಿರ್ದೇಶಕ ಪ್ರದೀಪ ತೇಲಸಂಗ ನಿಧನರಾಗಿದ್ದಾರೆ. ಅವರಿಗೆ 48 ವರ್ಷ ವಯಸ್ಸಾಗಿತ್ತು.
ಅಲ್ಪಕಾಲದ ಅನಾರೋಗ್ಯದಿಂದಾಗಿ ಅವರು ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಗ್ಗೆ ಸಾವಿಗೀಡಾದರು. ತಾಯಿ, ಪತ್ನಿ ಮಗ, ಮಗಳು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.
ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲೂ ಅವರು ಕೆಲಸ ಮಾಡುತ್ತಿದ್ದರು. ತೇಲಸಂಗ ಟ್ರೆವೆಲ್ಸ್ ಮೂಲಕ ಅವರದ್ದು ವಿವಿಧೆಡೆ ಪ್ರಯಾಣಿಕರ ಖಾಸಗಿ ಬಸ್ ಸಂಚಾರವಿದೆ.
ಶುಭ ಸುದ್ದಿ: ಹೊಸ ಸೋಂಕಿತರ ಸಂಖ್ಯೆಗಿಂತ ಡಿಸ್ಚಾರ್ಜ್ ಜಾಸ್ತಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ