ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮೊನ್ನೆ ಭಾನುವಾರ ಮಧ್ಯಾಹ್ನ ಸುಮಾರು 2 ಗಂಟೆಗಳ ಕಾಲ ಪ್ರಗತಿವಾಹಿನಿ ಓದುಗರು ಸುದ್ದಿ ಓದಲು ಪರದಾಡಬೇಕಾಯಿತು. ಪ್ರಗತಿವಾಹಿನಿ ವೆಬ್ ಸೈಟ್ ಓಪನ್ ಆಗುವುದೇ ಕಷ್ಟವಾಗಿತ್ತು. ಇದಕ್ಕೆ ಕಾರಣ ಏಕಕಾಲಕ್ಕೆ 30 ಸಾವಿರಕ್ಕೂ ಹೆಚ್ಚು ಓದುಗರು ವೆಬ್ ಸೈಟ್ ವಿಸಿಟ್ ಮಾಡಿದ್ದು.
ಅಪಾರ ಸಂಖ್ಯೆಯಲ್ಲಿ ಓದುಗರು ಒಮ್ಮೆಲೆ ಪ್ರಗತಿವಾಹಿನಿ ವೆಬ್ ಸೈಟ್ ಓಪನ್ ಮಾಡಲು ಪ್ರಯತ್ನಿಸಿದ್ದರಿಂದ ಕೆಲಹೊತ್ತು ವೆಬ್ ಸೈಟ್ ತೆರೆದುಕೊಳ್ಳುವುದು ಸಮಸ್ಯೆಯಾಯಿತು. ನಂತರ ನಮ್ಮ ವೆಬ್ ಸೈಟ್ ಡೆವಲಪರ್ ಸಹಾಯ ಪಡೆದು ವೆಬ್ ಸೈಟನ್ನು ಪುನಃ ಓದುಗರಿಗೆ ತೆರೆದುಕೊಳ್ಳುವಂತೆ ಮಾಡಲಾಯಿತು. ಕೇವಲ 6 ತಿಂಗಳಲ್ಲಿ 3ನೇ ಬಾರಿ ವೆಬ್ ಸೈಟ್ ಸಾಮರ್ಥ್ಯವನ್ನು ಹೆಚ್ಚಿಸಲಾಯಿತು.
ಭಾನುವಾರ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಸುದ್ದಿ ಪ್ರಕಟವಾದಾಗ ಸಾವಿರಾರು ಸಂಖ್ಯೆಯಲ್ಲಿ ಜನರು ಒಮ್ಮೆಲೆ ವೆಬ್ ಸೈಟ್ ವಿಸಿಟ್ ಮಾಡಿದರು. ಒಂದೇ ಗಂಟೆಯಲ್ಲಿ 36 ಸಾವಿರದಷ್ಟು ಜನರು ವೆಬ್ ಸೈಟ್ ಗೆ ವಿಸಿಟ್ ಮಾಡಿದ್ದರು.
ಅದೊಂದೇ ಸುದ್ದಿಯನ್ನು 1,12,560 ಜನರು ಓದಿದ್ದಾರೆ (ಫೋಟೋ ಗಮನಿಸಿ). ಲಕ್ಷಕ್ಕಿಂತ ಹೆಚ್ಚು ಜನರು ಸುದ್ದಿ ಓದಿದ್ದು ಪ್ರಗತಿವಾಹಿನಿಗೆ ತೀರಾ ಅಪರೂಪವೇನಲ್ಲ. ಅನೇಕ ಸುದ್ದಿಗಳನ್ನು ಲಕ್ಷಕ್ಕಿಂತ ಹೆಚ್ಚು ಜನರು ಓದಿದ್ದಾರೆ. ದಿನದ ಓದುಗರ ಸಂಖ್ಯೆಯಂತೂ ಅನೇಕ ದಿನ ಲಕ್ಷ ದಾಟಿರುತ್ತದೆ.
ಆದರೆ ಒಂದೇ ಬಾರಿಗೆ ದೊಡ್ಡ ಸಂಖ್ಯೆಯಲ್ಲಿ ಜನರು ವೆಬ್ ಸೈಟ್ ವಿಸಿಟ್ ಮಾಡಿದಾಗ ಎಂತಹ ವೆಬ್ ಸೈಟ್ ಆದರೂ ಕ್ರ್ಯಾಶ್ ಆಗುವುದು ಸಹಜ. ಪ್ರಗತಿವಾಹಿನಿ ವೆಬ್ ಸೈಟ್ ಕೂಡ ಹೀಗೇ ಆಗಿದ್ದು. ವೆಬ್ ಸೈಟ್ ಸಾಮರ್ಥ್ಯ ಲಕ್ಷ ಲಕ್ಷ ಓದುಗರನ್ನಾದರೂ ಸಹಿಸಿಕೊಳ್ಳುವಷ್ಟಿದೆ. ಆದರೆ ಒಮ್ಮೆಲೇ ದೊಡ್ಡ ಸಂಖ್ಯೆಯಲ್ಲಿ ಓಪನ್ ಮಾಡಲು ಯತ್ನಿಸಿದಾಗ ಕೆಲವು ಸಮಯ ಸಮಸ್ಯೆಯಾಗುತ್ತದೆ.
ಏನೇ ಆದರೂ ಅಲ್ಪಾವಧಿಯಲ್ಲೇ ಲಕ್ಷ ಲಕ್ಷ ಓದುಗರನ್ನು ಹೊಂದಿರುವುದು ನಮ್ಮ ಹೆಮ್ಮೆ. ನಿಮಗಿದೋ ಕೋಟಿ ಕೋಟಿ ವಂದನೆಗಳು. ಸಹಕಾರ ಎಂದೆಂದೂ ಇರಲಿ.
-ಎಂ.ಕೆ.ಹೆಗಡೆ, ಸಂಪಾದಕ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ