*ಪೊರಕೆ ಹಿಡಿದು ಬೀದಿ ಬೀದಿ ಸ್ವಚ್ಛಗೊಳಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ*
ಪ್ರಗತಿವಾಹಿನಿ ಸುದ್ದಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಇಂದು ಬೆಳ್ಳಂಬೆಳಗ್ಗೆ ಸುಮಾರು 15000ಕ್ಕೂ ಹೆಚ್ಚು ಜನರ ಕೈಯಲ್ಲಿ ಪೊರಕೆ, ಬುಟ್ಟಿ ಕಂಡುಬಂತು. ಪರಿಣಾಮ ಹುಬ್ಬಳ್ಳಿ ಶಹರ ಭಾನುವಾರ ಶುಭ್ರವಾಗಿ ನಳ ನಳಿಸುತ್ತಿತ್ತು.
ಜನಜಂಗುಳಿಯಿಂದಾಗಿ ಸದಾ ಕಸದ ರಾಶಿಯಿಂದ ತುಂಬಿರುತ್ತಿದ್ದ ಎಪಿಎಂಸಿ, ಬಸ್ ನಿಲ್ದಾಣ ಹೀಗೆ ನಗರದ ಪ್ರಮುಖ ಪ್ರದೇಶಗಳಲ್ಲಿ, ಬೀದಿ ಬೀದಿಗಳಲ್ಲಿ ಸ್ವಚ್ಛತೆ ಕೆಲಸ ಭರದಿಂದ ನಡೆಯಿತು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನೇತೃತ್ವದಲ್ಲಿ ಸ್ವಚ್ಛ ಹುಬ್ಬಳ್ಳಿ-ಸ್ವಚ್ಛ ಭಾರತ ಅಭಿಯಾನ ಯಶಸ್ವಿಯಾಗಿ ಸಾಗಿತು. ಡಾ.ನಾನಾಸಾಹೇಬ್ ಧರ್ಮಾಧಿಕಾರಿ ಪ್ರತಿಷ್ಠಾನ ಇದರ ಸಾರಥ್ಯ ವಹಿಸಿತ್ತು.
ಕೈ ಜೋಡಿಸಿದ ಮಧ್ವರಾಜ್: ಉಡುಪಿ ಜಿಲ್ಲೆ ಬಿಜೆಪಿ ನಾಯಕ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸಹ ಹುಬ್ಬಳ್ಳಿಯ ಈ ಸ್ವಚ್ಛತಾ ಅಭಿಯಾನದಲ್ಲಿ ಭಯಾಗಿದ್ದು ವಿಶೇಷವಾಗಿತ್ತು.
ಸ್ವಚ್ಛತಾ ಕಾರ್ಯದಲ್ಲಿ ಸಚಿವರ ಜತೆ ಶಾಸಕರಾದ ಅರವಿಂದ ಬೆಲ್ಲದ, ಮಹೇಶ್ ಟೆಂಗಿನಕಾಯಿ, ಹು-ಧಾ ಮಹಾನಗರ ಪಾಲಿಕೆ ಮಹಾಪೌರರಾದ ವೀಣಾ ಬರದ್ವಾಢ ಹಾಗೂ ಪಾಲಿಕೆ ಸದಸ್ಯರು ಮತ್ತು ಸಂಸ್ಥೆ ಪ್ರಮುಖರು ಭಾಗಿಯಾಗಿ ಸ್ವಚ್ಛತೆಗೆ ಪ್ರೇರಣೆ ನೀಡಿದರು.
ಪ್ರಧಾನಿ ಮೋದಿ ಅವರ ಸ್ವಚ್ಛತೆ ಪರಿಕಲ್ಪನೆ ಅದ್ಭುತ
ನಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಡುವುದು ನಮ್ಮ ಕರ್ತವ್ಯವಾಗಿದ್ದು, ಪ್ರಧಾನಿ ಮೋದಿ ಅವರ ಸ್ವಚ್ಛ ಭಾರತದ ಈ ಪರಿಕಲ್ಪನೆ ಅದ್ಭುತ ಎಂದು ಸಚಿವ ಪ್ರಹ್ಲಾದ ಜೋಶಿ ಬಣ್ಣಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಶಯದಂತೆ ಸ್ವಚ್ಛ ಭಾರತ ಅಭಿಯಾನಕ್ಕೆ ಎಲ್ಲೆಲ್ಲೂ ಅಭೂತಪೂರ್ವ ಸ್ಪಂದನೆ ಲಭಿಸುತ್ತಿದೆ. ದೇಶಾದ್ಯಂತ ಜನರು ಸ್ವಯಂ ಪ್ರೇರಿತರಾಗಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಅಭಿನಂದನಾರ್ಹ ಎಂದು ಜೋಶಿ ಹೇಳಿದರು.
ಇಂದು ಹಮ್ಮಿಕೊಂಡಿದ್ದ ಈ ವಿಶೇಷ ಅಭಿಯಾನದಲ್ಲಿ ಹುಬ್ಬಳ್ಳಿ – ಧಾರವಾಡ ಅವಳಿ ನಗರ ಬಿಜೆಪಿಯ15,000ಕ್ಕೂ ಹೆಚ್ಚು ಕಾರ್ಯಕರ್ತರು ನಗರದ ಸ್ವಚ್ಛತೆಗೆ ಶ್ರಮಿಸಿದ್ದು ಮಾದರಿಯಾಗಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ