Kannada NewsKarnataka NewsLatest
*ಮಾಜಿ ಶಾಸಕ ವಿ.ಎಸ್.ಪಾಟಿಲ್ ಪುತ್ರನ ಬಂಧನ*

ಪ್ರಗತಿವಾಹಿನಿ ಸುದ್ದಿ: ಮಾಜಿ ಶಾಸಕ ವಿ.ಎಸ್.ಪಾಟೀಲ್ ಪುತ್ರನನ್ನು ಪೊಲೀಸರು ಬಂಧಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.
ಬಾಪುಗೌಡ ಪಾಟೀಲ್ ಬಂಧಿತ ಆರೋಪಿ. ಎಎಸ್ಐ ಓರ್ವರ ಮೇಲೆ ಮೇಲೆ ಹಲ್ಲೆ ಹಾಗೂ ಚೆಕ್ ಬೌನ್ಸ್ ಪ್ರಕರಣದಲ್ಲಿ ಬಾಪುಗೌಡ ಪಾಟೀಲ್ ನನ್ನು ಸೆರೆಹಿಡಿಯಲಾಗಿದೆ ಎಂದು ತಿಳಿದುಬಂದಿದೆ.
ಎಎಸ್ಐ ಬಾಲಕೃಷ್ಣ ಪಾಲೇಕರ್ ಮೇಲೆ ಹಲ್ಲೆ ನಡೆಸಿ ನಿಂದಿಸಿದ ಆರೋಪದಲ್ಲಿ ಹಾಗೂ 2 ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಪುಗೌಡ ಪಾಟೀಲ್ ನನ್ನು ಬಂಧಿಸಲಾಗಿದೆ. ಆರೋಪಿ ಬಾಬುಗೌಡ ಪಾಟೀಲ್ ಸದ್ಯ ಶಿರಸಿಯ ಸಬ್ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿದ್ದಾನೆ.



