Kannada NewsKarnataka NewsLatestPolitics

*ಹುಚ್ಚರಂಗ್ ಏನೇನೋ ಮಾತಾಡಬೇಡಿ, ಜನ ಅದ್ಕೆ ಮೂಲೆಗುಂಪು ಮಾಡಿದ್ದಾರೆ ನಿಮ್ಮನ್ನ*

ಮೋದಿ ಸುಳ್ಳಿನ ಕ್ರಾಂತಿ ಎಂದ ಕಾಂಗ್ರೇಸ್ ಹೇಳಿಕೆಗೆ ಪ್ರಹ್ಲಾದ ಜೋಶಿ ತಿರುಗೇಟು

ಪ್ರಗತಿವಾಹಿನಿ ಸುದ್ದಿ: ಹುಚ್ಚು ಹುಚ್ಚರ ಹಾಗೆ ಏನೇನೋ ಮಾತಾಡಬೇಡಿ. ಆಗಲೇ ಜನ ನಿಮ್ಮನ್ನು ದೇಶದಲ್ಲಿ ಮೂಲೆಗುಂಪು ಮಾಡಿದ್ದಾರೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಕಾಂಗ್ರೆಸ್ ನಾಯಕರ ವಿರುದ್ಧ ಗುಡುಗಿದರು.

Home add -Advt

ಹುಬ್ಬಳ್ಳಿಯಲ್ಲಿ ಇಂದು ಪತ್ರಕರ್ತರೊಂದಿಗೆ ಮಾತನಾಡಿ, ಸುಳ್ಳು ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಮುಖಗಳು. ಇವರು ಸತ್ಯ ಹರೀಶ್ಚಂದ್ರರಾಗಿದ್ದಾರೆ ದೇಶದ ಜನ ನಿಮ್ಮನ್ನೇಕೆ ಮೂಲೆಗುಂಪು ಮಾಡುತ್ತಿದ್ದರು? ಎಂದು ಜೋಶಿ ಪ್ರಶ್ನಿಸಿದರು.

ಕಾಂಗ್ರೆಸ್ ನಾಯಕರು ಮೋದಿ ಅವರನ್ನು ಸುಳ್ಳಿನ ಸರದಾರ, ಸುಳ್ಳಿನ ಕ್ರಾಂತಿಕಾರ ಎನ್ನುತ್ತಿದ್ದಾರಲ್ಲ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಜೋಶಿ, ಕಾಂಗ್ರೆಸ್ಸೇ ಒಂದು ಸುಳ್ಳು. ಪ್ರಧಾನಿ ಮೋದಿ ಮತ್ತು ಬಿಜೆಪಿ ಮೇಲೆ ಸುಳ್ಳು ಪದ ಪ್ರಯೋಗಿಸುತ್ತಿಯೇ? ಅಯ್ಯೋ ರಾಮಾ..! ಎಂದು ಉದ್ಘರಿಸಿದರು.

ಅರೇಳು ದಶಕಗಳ ಕಾಲ ಗರೀಭಿ ಹಠಾವೋ ಎಂದು ಸುಳ್ಳು ಹೇಳಿದವರು ಯಾರು? ಇವತ್ತು ಗರೀಭಿ ಹಠಾವೋ ಆಗಿದ್ದಿದ್ರೆ
ಫ್ರೀ ಕೊಡುವ ಪರಿಸ್ಥಿತಿ ಏಕೆ ಬರುತ್ತಿತ್ತು? ಶ್ರೀಮಂತರಿಗೆ ಫ್ರೀ ಕೊಡುತ್ತಿದ್ದೀರಾ ಹಾಗಾದರೆ? ಎಂದು ಪ್ರಶ್ನಿಸಿದರು.

ಬ್ಯಾಂಕಿಂಗ್ ವಂಚನೆ ಮಾಡಿದ್ರಿ ಸುಳ್ಳು ಹೇಳಿದ್ರಿ, ಕಲ್ಲಿದ್ದಲು ಹಗರಣ ಮಾಡಿದ್ರಿ, 34000 ಚ. ಕಿ.ಮೀ. ಭೂಮಿ ಚೀನಾ ಪಾಲು ಮಾಡಿದ್ರಿ. ಈಗ ಚೀನಾ ಆಕ್ರಮಣ ಬಗ್ಗೆ ಮಾತಾಡುತ್ತಿದ್ದೀರಿ. ನಾಚಿಕೆ ಆಗುವುದಿಲ್ಲವೇ ಕಾಂಗ್ರೆಸ್ಸಿಗರಿಗೆ? ಎಂದು ತರಾಟೆಗೆ ತೆಗೆಗುಕೊಂಡರು.

ಒಂದು ಕಾಲದಲ್ಲಿ ಉತ್ತರ ಪ್ರದೇಶದವರೇ ಪ್ರಧಾನಿ, ಉತ್ತರದೇಶ, ಲಖ್ನೋ ಸೇರಿದಂತೆ ಸಣ್ಣ ಮುನ್ಸಿಪಾಲ್ಟಿಯಲ್ಲೂ ಕಾಂಗ್ರೆಸ್ ಆಡಳಿತವಿತ್ತು. ಆದರೆ ಇವತ್ತು 2-3 ಸಿಟಿಗೆ ಭಿಕ್ಷೆ ಬೇಡುತ್ತಿದ್ದೀರಿ. ನಿಮ್ಮ ಪರಿಸ್ಥಿತಿ ಎಲ್ಲಿಗೆ ಬಂದು ನಿಂತಿದೆ? ಜನ ನಿಮ್ಮನ್ನು ಯಾವ ಮಟ್ಟಕ್ಕೆ ಒಯ್ದಿದ್ದಾರೆ ನೋಡಿಕೊಳ್ಳಿ ಎಂದು ಸಚಿವ ಜೋಶಿ ತಿರುಗೇಟು ನೀಡಿದರು.

ಉತ್ತರ ಪ್ರದೇಶದಲ್ಲಿ ರಾಬರ್ಟ್ ವಾದ್ರಾ ಅವರನ್ನು ನಿಲ್ಲಿಸಿದ್ದಾರೆ. ಅವ್ರು ಸೋಲ್ತಾರೆ. ಅಲ್ಲಿ ಕಾಂಗ್ರೆಶ ಗೆ ಶೂನ್ಯ. ಇನ್ನು ಮಹಾರಾಷ್ಟ್ರದಲ್ಲಿ 2-3 ಸೀಟು ಗೆಲ್ಲೋದು ಕಷ್ಟ. ಉತ್ತರಾಖಂಡದಂತಹ ಸಣ್ಣ ರಾಜ್ಯದಲ್ಲೂ ಅಸ್ತಿತ್ವವಿಲ್ಲ. ಇಂಥ ಸ್ಥಿತಿ ತಲುಪಿದ್ದೀರಿ ಎಂದು ಹೇಳಿದರು.

ಈಗ ಬಿಜೆಪಿ ಬಗ್ಗೆ ಸುಳ್ಳಿನ ಕ್ರಾಂತಿ ಎನ್ನುತ್ತಿದ್ದೀರಿ. ಹೀಗೆ ಹುಚ್ಚ ಹುಚ್ಚರ ಹಾಗೆ ಆಡುವುದಕ್ಕೆ ಇಂದು ಜನ ನಿಮ್ಮನ್ನ ಈ ಸ್ಥಿತಿಗೆ ತಂದಿದ್ದಾರೆ ಎಂದು ಸಚಿವ ಪ್ರಹ್ಲಾದ ಜೋಶಿ ಕಾಂಗ್ರೆಸ್ಸಿಗರ ವಿರುದ್ಧ ಹರಿ ಹಾಯ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button