Latest

ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಕವಟಗಿಮಠ, ಶಹಾಪುರ, ನಮೋಶಿ ಹೆಸರು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ವಿಧಾನ ಪರಿಷತ್ ಸಭಾಪತಿ ಸ್ಥಾನವನ್ನು ಕಾಂಗ್ರೆಸ್ ನಿಂದ ಕಸಿಯಲು ಬಿಜೆಪಿ ಪ್ರಯತ್ನ ನಡೆಸಿದ್ದು, ಜೆಡಿಎಸ್ ಬೆಂಬಲದೊಂದಿಗೆ ಯಶಸಾಧಿಸುವ ಸಾಧ್ಯತೆ ಇದೆ.

ಕಾಂಗ್ರೆಸ್ ನ ಪ್ರತಾಪ ಚಂದ್ರ ಶೆಟ್ಟಿಯನ್ನು ಕೆಳಗಿಳಿಸಿ ಬಿಜೆಪಿಯ ಒಬ್ಬರನ್ನು ಸಭಾಪತಿ ಮಾಡುವುದು ಬಹುತೇಕ ನಿಚ್ಛಳವಾಗಿದೆ. ಜೆಡಿಎಸ್ ಬೆಂಬಲ ಪಡೆಯದಿರಲು ಕಾಂಗ್ರೆಸ್ ಈಗಾಗಲೆ ನಿರ್ಧರಿಸಿದೆ. ಹಾಗಾಗಿ ಜೆಡಿಎಸ್ ಬಿಜೆಪಿಗೆ ಬಂಬಲ ನೀಡುವುದು ಖಚಿತವಾಗಿದೆ.

ಸೋಮವಾರದಿಂದ ಅಧಿವೇಶನ ಆರಂಭವಾಗಲಿದ್ದು, ಬಿಜೆಪಿಯ ಮೂವರ ಹೆಸರು ಪ್ರಸ್ತಾಪವಾಗಿದೆ.  ಮಹಾಂತೇಶ ಕವಟಗಿಮಠ,  ಅರುಣ ಶಹಾಪುರ ಮತ್ತು ಶಶಿಲ್ ನಮೋಶಿ ಹೆಸರು ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಚರ್ಚೆಯಾಗುತ್ತಿದೆ. 

ಸಿಎಂ ಪರಮಾಧಿಕಾರ ಎಂಬ ದೊಡ್ಡ ಜೋಕ್

ಸಿಎಂ ಪರಮಾಧಿಕಾರ ಎಂಬ ದೊಡ್ಡ ಜೋಕ್

Related Articles

Back to top button