Belagavi NewsBelgaum NewsKannada NewsKarnataka NewsLatest

*ವಿವಿಧ ಪ್ರಶಸ್ತಿಗಳಿಗೆ ಕೃತಿಗಳ ಆಹ್ವಾನ*

ವಿವಿಧ ಪ್ರಶಸ್ತಿಗಳಿಗೆ ಕೃತಿಗಳ ಆಹ್ವಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲಾ ಸಾಹಿತ್ಯ ಪ್ರತಿಷ್ಠಾನವು ಪ್ರತಿ ವರ್ಷದಂತೆ 2025ನೇ ಸಾಲಿನಲ್ಲಿ ಪ್ರಕಟವಾದ ಪುಸ್ತಕಗಳನ್ನು ವಿವಿಧ ದತ್ತಿ ನಿಧಿ ಪ್ರಶಸ್ತಿಗಳಿಗಾಗಿ ಆಹ್ವಾನಿಸಲಾಗಿದೆ. ಸಾಹಿತ್ಯದ ಎಲ್ಲ ಪ್ರಕಾರದ ಪುಸ್ತಕಗಳು ಪ್ರಶಸ್ತಿಗೆ ಅರ್ಹವಾಗಿರುತ್ತವೆ.
ಕೃತಿಕಾರರು ಬೆಳಗಾವಿ ಜಿಲ್ಲೆಯವರೇ ಆಗಿರಬೇಕು. ವಿಳಾಸ ಮತ್ತು ಮೊಬೈಲ್ ನಂಬರದೊಂದಿಗೆ ಕಡ್ಡಾಯವಾಗಿ ತಮ್ಮ ಮೂರು ಪುಸ್ತಕಗಳ ಪ್ರತಿಗಳನ್ನು ಕಳುಹಿಸಬೇಕು.

Home add -Advt

ಕೃತಿಕಾರರು, ಸಾಹಿತಿಗಳು, ಲೇಖಕರು ತಮ್ಮ ಪುಸ್ತಕಗಳನ್ನು, 255, ವಿಜಯಾ ರೆಸಿಡೆನ್ಸಿ , ಎಫ್-2, ಗುರುಪ್ರಸಾದ್ ಕಾಲೊನಿ, ಟಿಳಕವಾಡಿ, ಬೆಳಗಾವಿ, 590006. ಈ ವಿಳಾಸಕ್ಕೆ ಆಗಸ್ಟ್ 15 ರೊಳಗೆ ಕಳುಹಿಸಬೇಕು ಎಂದು ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ಕಾರ್ಯದರ್ಶಿ ನೀರಜಾ ನಾರಾಯಣ ಗಣಾಚಾರಿ ಇವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ 9481656405, 9448634440, 9448637797, 9448437139 ಈ ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಬಹುದು.

Related Articles

Back to top button